ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಸಭೆ ನಾಡಿದ್ದು

09 ylp m.r.hegde
Published on

ಯಲ್ಲಾಪುರ: ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘಕ್ಕೆ 25 ವರ್ಷ ತುಂಬಿದ್ದು, ಸೆ. 12ರಂದು ಮಧ್ಯಾಹ್ನ 3.30ಕ್ಕೆ ಅಡಕೆ ಭವನದಲ್ಲಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.


ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಕಳೆದ ಸಾಲಿನಲ್ಲಿ 45.85 ಲಕ್ಷ ರೂ. ಲಾಭ ಗಳಿಸಿದೆ. ಕೃಷಿ ಉಪಕರಣ, ಯಂತ್ರಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ಪೂರೈಸುತ್ತಾ ಬಂದಿದೆ. ಯಲ್ಲಾಪುರ, ಮುಂಡಗೋಡ, ಅಂಕೋಲಾ ಹಾಗೂ ಜೊಯಿಡಾ ತಾಲೂಕುಗಳ ರೈತರು ಸಂಘದ ವ್ಯವಹಾರದಲ್ಲಿ ಸಕ್ರಿಯವಾಗಿ ಪೋ›ತ್ಸಾಹಿಸುತ್ತಾ ಬಂದಿದ್ದಾರೆ. ಈ ಬಾರಿ ಸರ್ವಸಾಧಾರಣ ಸಭೆಯಲ್ಲಿ 12 ಕೃಷಿ ಸಾಧಕರನ್ನು ಗೌರವಿಸಲಾಗುತ್ತದೆ ಎಂದರು.


ಸಂಘದ ಉಪಾಧ್ಯಕ್ಷ ಎಂ.ಜಿ. ಭಟ್ಟ ಶಿಗೇಪಾಲ, ನಿರ್ದೇಶಕರಾದ ಎಂ.ಆರ್. ಹೆಗಡೆ ತಾರೆಹಳ್ಳಿ, ಮಧುಸೂಧನ ಭಟ್ಟ, ಮುಖ್ಯ ಕಾರ್ಯನಿರ್ವಹಕ ವಿನಾಯಕ ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net