ವೈದ್ಯ ವೃತ್ತಿ ಮಾನವ ಕುಲದ ಸೇವೆ

The medical profession is a service to mankind
ವಿಜಯಪುರದ ಸಿಕ್ಯಾಬ್​ ಸಂಸ್ಥೆಯ ಲೂಕ್ಮಾನ್​ ಯುನಾನಿ ವೈದ್ಯಕಿಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗಾಗಿ ಪದವಿ ಪ್ರಧಾನ ಮಾಡಲಾಯಿತು. ಸಲಾವುದ್ಧಿನ್​ ಪುಣೇಕರ್​, ಶಂಕರಗೌಡ ಸೋಮನಾಳ, ಎ.ಎಸ್​. ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ವೈದ್ಯ ವೃತ್ತಿ ಕೇವಲ ವೃತ್ತಿಯಾಗಿರದೇ ಮಾನವ ಕುಲದ ಸೇವೆಯಾಗಿದೆ. ವೈದ್ಯರು ಸಹಾನುಭೂತಿಯ ಸಂಕೇತವಾಗಿದ್ದು, ಜನರ ಜೀವನವನ್ನು ವೈದ್ಯರಿಗೆ ವಹಿಸಲಾಗಿದೆ. ಹೀಗಾಗಿ ವೈದ್ಯರು ಬಹಳ ಜಾಗರೂಕರಾಗಿರಬೇಕು ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.

ನಗರದ ಸಿಕ್ಯಾಬ್​ ಸಂಸ್ಥೆಯ ಲೂಕ್ಮಾನ್​ ಯುನಾನಿ ವೈದ್ಯಕಿಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಬಿಯುಎಂಎಸ್​ಎಂಡಿಎಂಎಸ್​ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡ ಪದವಿ ದಿನ (ಗ್ರಾಜುಯೇಷನ್​ ಡೇ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಥೆಯ ನಿರ್ದೇಶಕ ಸಲಾವುದ್ಧಿನ್​ ಪುಣೇಕರ್​ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಸಲ್ಲಿಸಿ, ವೈದ್ಯ ವಿದ್ಯಾರ್ಥಿಗಳು ನೀವು ಸಮಾಜಕ್ಕೆ ಹಾಗೂ ಜಗತ್ತಿಗೆ ನಿಮ್ಮ ಕೊಡುಗೆ ನೀಡುವ ಮೂಲಕ ಉತ್ತಮ ಸಲ್ಲಸಬೇಕು ಎಂದು ಹೇಳಿದರು.

ಪ್ರಾಚಾರ್ಯ ಡಾ. ಶೈನಾಜ್​ ವಾರ್ಷಿಕ ವರದಿ ವಾಚಿಸಿದರು. ಸಲ್ಮಾ ಚಾವೂಶ್​ ಸ್ವಾಗತಿಸಿದರು. ಡಾ. ನೂಜಹತ್​ ಪಟೇಲ್​ ನಿರೂಪಿಸಿದರು. ಡಾ. ನಿಖತ್​ ಇನಾಮಾದಾರ ವಂದಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಸೈಯದ್​ ವಾಜಿದ ಪೀರಜಾದೆ ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಎ.ಎಸ್​. ಪಾಟೀಲ, ಸಿ.ಎಸ್​. ನಿಂಬಾಳ, ಜಿ.ಎ. ಅತನೂರ, ನಜೀಬ್​ ಭ, ಡೀನ್​ ಡಾ. ಅಖಿಲ್​ ಖಾದರಿ, ಉಪ ಪ್ರಾಚಾರ್ಯ ಡಾ. ತಸ್ಮಿಯಾ, ವಿದ್ಯಾರ್ಥಿಗಳು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net