ಜನರ ಕುಂದು-ಕೊರತೆ ಆಲಿಸಿದ ಮೇಯರ್​

25 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಲಕ್ಷ್ಮೀ ನಗರಕ್ಕೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದ ಮೇಯರ್​ ರಾಮಪ್ಪ ಬಡಿಗೇರ, ನಿವಾಸಿಗಳ ಕುಂದು-ಕೊರತೆಗಳ ಮಾಹಿತಿ ಪಡೆದರು.
ಲಕ್ಷ್ಮೀ ನಗರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅರುಣ ಅಂಗಡಿ ಮಾತನಾಡಿ, ನಗರದಲ್ಲಿ ಹೈಮಾಸ್ಟ್​ ವಿದ್ಯುತ್​ ದೀಪ, ವಾಕಿಂಗ್​ ಪಾತ್​, ಸುಂದರ ಉದ್ಯಾನವನ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.
ರಾಮಪ್ಪ ಬಡಿಗೇರ ಮಾತನಾಡಿ, ನಗರಕ್ಕೆ ಅಗತ್ಯವಾಗಿರುವ ಎಲ್ಲ ಬೇಡಿಕೆಗಳನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ಸಂಜಯ ಕಪಟಕರ ಮಾತನಾಡಿ, ಈ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪಾಲಿಕೆ ಸದಸ್ಯ ವಿಷ್ಣುತಿರ್ಥ ಕೊರ್ಲಹಳ್ಳಿ, ಪಾಲಿಕೆ ಮಾಜಿ ಸದಸ್ಯ ಬಸವರಾಜ ಮುತ್ತಳ್ಳಿ, ನಿವಾಸಿಗಳಾದ ಲಿಂಗರಾಜ ಬೈಲಗಾಣದ, ಡಾ. ಎಂ.ವೈ. ಸಾವಂತ, ಅಶೋಕ ಅವಲಕ್ಕಿ, ಗಣೇಶ ಜೋಶಿ, ಎಸ್​.ಆರ್​. ಗಂಗಾ, ರಾಜಶೇಖರ ಕಲ್ಮಂಗಿ, ಮಂಜುನಾಥ, ಇತರರು ಇದ್ದರು.
ಬಸವರಾಜ ತಾಳಿಕೋಟಿ ಸ್ವಾಗತಿಸಿದರು. ಉದಯ ಗಿರಿಯಮ್ಮನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net