

ಮೈಸೂರು: ಕರ್ನಾಟಕ ಹಾಗೂ ಹೈದರಾಬಾದ್ ತಂಡಗಳ ನಡುವಿನ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ (23 ವಯೋಮಿತಿಯೊಳಗಿನವರ ಕ್ರಿಕೆಟ್) ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ಮುಕ್ತಾಯಗೊಂಡ ಪಂದ್ಯದ ಕಡೆಯ ದಿನ ಹೈದರಾಬಾದ್ ತಂಡದ ಬ್ಯಾಟರ್‌ಗಳು ಪ್ರಾಬಲ್ಯ ಮೆರೆದರು. 2 ವಿಕೆಟ್‌ಗೆ 102 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ ಹೈದರಾಬಾದ್ ತಂಡ 5 ವಿಕೆಟ್‌ಗೆ 353 ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು.
ಪ್ರತಿಯಾಗಿ ಎರಡನೇ ಇನಿಂಗ್ಸ್ ಆರಂಭಿಸಿದ ಆತಿಥೇಯ ಕರ್ನಾಟಕ ತಂಡ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 29 ಗಳಿಸಿ ಡ್ರಾ ಸಾಧಿಸಿತು. ಹೈದರಾಬಾದ್ ತಂಡದ ಆರಂಭಿಕ ಅಮನ್‌ರಾವ್ (105) ಹಾಗೂ ನಾಯಕ ಕೆ.ಹಿಮತೇಜ(166*) ಭರ್ಜರಿ ಶತಕ ಬಾರಿಸಿ ಗಮನ ಸೆಳೆದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಇಲ್ಯಾನ್ ಸತಾನಿ(50) ಅಜೇಯ ಅರ್ಧ ಶತಕ ದಾಖಲಿಸಿ ಮಿಂಚಿದರು.