ಗಾಂಜಾ ಪೂರೈಸುತ್ತಿದ್ದ ಮಾಸ್ಟರ್​ ಮೈಂಡ್​ ಬಂಧನ

22_BGV_dvk 3
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: portrait;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 45;
Published on

ಬೆಳಗಾವಿ: ಇಲ್ಲಿನ ಸೈಬರ್​, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ತನಿಖಾ ತಂಡ (ಸಿಇಎನ್​) ವಿಶೇಷ ಕಾರ್ಯಾಚರಣೆ ನಡೆಸಿ ಕರ್ನಾಟಕಕ್ಕೆ ಮಧ್ಯಪ್ರದೇಶ, ಒಡಿಶಾದಿಂದ ಗಾಂಜಾ ಪೂರೈಸುತ್ತಿದ್ದ ಮಾಸ್ಟರ್​ ಮೈಂಡ್​ ಓರ್ವನನ್ನು ಆತನ ತಂಡದ ಸಮೇತ ಬಂಧಿಸಿ, 50 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮಾಸ್ಟರ್​ ಮೈಂಡ್​ ಇಸ್ಮಾಯಿಲ್​ ಅಲಿಯಾಸ್​ ಸದ್ದಾಂ ಬಾಬು ಸಯ್ಯದ್​, ತಾಜೀರ್​ ಬಸ್ತವಾಡೆ, ಪ್ರಥಮೇಶ ಲಾಡ್​, ತೇಜಸ್​ ವಾಜರೆ, ಶಿವಕುಮಾರ ಆಸಬೆ ಹಾಗೂ ರಮಜಾನ್​ ಜಮಾದಾರ ಬಂಧಿತರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್​ ಆಯುಕ್ತ ಭೂಷಣ ಬೋರಸೆ ಈ ಕುರಿತು ಮಾಹಿತಿ ನೀಡಿ, ಸಿಇಎನ್​ ಪೊಲೀಸರು ಜೂ. 29ರಂದು ತಾಜಿಬ್​ ಮುಲ್ಲಾ ಮತ್ತು ಅನುರಾಗ ಯರಳಾನಕರನ್ನು ಬಂಧಿಸಿ 5 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಇದರ ಮೂಲ ಬೆನ್ನತ್ತಿದ ಸಿಇಎನ್​ ಠಾಣೆ ಇನ್ಸಪೆಕ್ಟರ್​ ಬಿ.ಆರ್​. ಗಡ್ಡೇಕರ ನೇತೃತ್ವದ ತಂಡ ಜುಲೈ 21ರಂದು ಮುಂಬೈದಲ್ಲಿ ಸದ್ದಾಂ ಮನೆ ಮೇಲೆ ದಾಳಿ ಮಾಡಿ, ಆತನ ಮಾವ ಅಬ್ದುಲ್​ಮಾಜೀದ್​ನನ್ನು 2 ಕೆಜಿ ಗಾಂಜಾದೊಂದಿಗೆ ಬಂಧಿಸಿ ಕರೆತಂದಿದ್ದರು. ಈ ಎಲ್ಲ ಆರೋಪಿಗಳು ಹಿಂಡಲಗಾ ಜೈಲಿನಲ್ಲಿದ್ದರು. ಇವರನ್ನು ಭೇಟಿಯಾಗಲು ನಿನ್ನೆ (ಗುರುವಾರ) ಸದ್ದಾ ಬೆಳಗಾವಿಗೆ ಬರುತ್ತಿದ್ದ ಮಾಹಿತಿ ಆಧರಿಸಿ ಮಹಾರಾಷ್ಟ್ರದ ಚಂದಗಡ ತಾಲೂಕಿನಲ್ಲಿ ದಾಳಿ ಮಾಡಿ 42.730 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಪ್ರಕರಣದಲ್ಲಿ ಇಲ್ಲಿಯವರೆಗೆ 9 ಆರೋಪಿಗಳನ್ನು ಬಂಧಿಸಿ ಒಟ್ಟು 50.452 ಕೆಜಿ ಗಾಂಜಾ, 13 ಮೊಬೈಲ್​, 2 ಕಾರು, 1 ಬೈಕ್​, ಮಾರಕಾಸ, ಇತರ 11 ವಸ್ತುಗಳು ಸೇರಿ ಒಟ್ಟು 30 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದೇವೆ ಎಂದರು. ಡಿಸಿಪಿಗಳಾದ ನಾರಾಯಣ ಬರಮನಿ, ನಿರಂಜನ ರಾಜೇ ಅರಸ್​, ಸೆನ್​ ಇನ್ಸಪೆಕ್ಟರ್​ ಬಿ.ಆರ್​. ಗಡ್ಡೇಕರ ಇತರರಿದ್ದರು.

ದಾಖಲೆಯ ಗಾಂಜಾ ವಶ ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ದಾಖಲೆಯ ನೂರು ಕೆಜಿಯಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ವರ್ಷ ಇಲ್ಲಿಯವರೆಗೆ 129 ಎನ್​ಡಿಪಿಎಸ್​ ಕೇಸ್​ಗಳಲ್ಲಿ 97 ಆರೋಪಿಗಳನ್ನು ಬಂಧಿಸಿ 33.97 ಲಕ್ಷ ರೂ. ಮೌಲ್ಯದ 102 ಕೆಜಿ 897 ಗ್ರಾಂದಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದೆ. 2023ರಲ್ಲಿ 12 ಕೆಜಿ 679 ಗ್ರಾಂ ಮತ್ತು 2024ರಲ್ಲಿ 11 ಕೆಜಿ 788 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸ್​ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net