ಗೆಲುವಿಗೆ ಶ್ರಮಿಸಿದ ಮರಾಠ ಸಮುದಾಯ, ಕೃತಜ್ಞತೆ ಸಲ್ಲಿಸಿದ ಶಾಸಕ ಜಿ.ಎಸ್. ಪಾಟೀಲ

GS PATIL
Published on

ಗಜೇಂದ್ರಗಡ: ಕಳೆದ ಸಲಕ್ಕಿಂತ ಈ ಸಲ ಮರಾಠ ಸಮಾಜದವರು ನನ್ನ ಬೆಂಬಲಕ್ಕೆ ನಿಂತು ಹೆಚ್ಚಿನ ಮತ ಹಾಕಿಸಿದ್ದಾರೆ. ಇದರಿಂದ ನನ್ನ ಗೆಲುವಿನ ಅಂತರದಲ್ಲಿ ಹೆಚ್ಚಳವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಶಿವಾಜಿಪೇಟೆಯ ಛತ್ರಪತಿ ಶಿವಾಜಿ ಮಹಾರಾಜರ ಸಮುದಾಯ ಭವನದಲ್ಲಿ ಮರಾಠ ಸಮಾಜದಿಂದ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮರಾಠ ಸಮಾಜದ ಬಹುತೇಕರು ಶ್ರಮಿಕ ವರ್ಗದವರಾಗಿದ್ದು, ಕಾರ್ವಿುಕ ಕಾರ್ಡ್ ಮಾಡಿಸಿಕೊಂಡರೆ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಮರಾಠ ಸಮಾಜದ ಮಾಜಿ ಅಧ್ಯಕ್ಷ ಶೇಖಪ್ಪ ರಾಮಜಿ ಮಾತನಾಡಿ, ನಮ್ಮ ಸಮಾಜದ ಹಲವು ಕುಂದು-ಕೊರತೆಗಳಿಗೆ ಶಾಸಕರು ತಕ್ಷಣ ಸ್ಪಂದಿಸುತ್ತಾರೆ. ಅವರಿಗೆ ನಮ್ಮ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಪುರಸಭೆ ಸದಸ್ಯ ಶಿವರಾಜ ಘೊರ್ಪಡೆ ಮಾತನಾಡಿ, ನಮ್ಮ ಸಮಾಜದ ಬಗ್ಗೆ ಶಾಸಕರಾದ ಜಿ.ಎಸ್. ಪಾಟೀಲರು ಕಳಕಳಿ ಇಟ್ಟುಕೊಂಡಿದ್ದಾರೆ. ಸಮಾಜದ ಸಮುದಾಯ ಭವನ ನಿರ್ವಣಕ್ಕೆ ಸಹಾಯ ನೀಡಿದ್ದಾರೆ ಎಂದು ಸ್ಮರಿಸಿದರು.

ಪರಸಪ್ಪ ಪೂಜಾರ, ಜಗದೀಶ ಕಲ್ಗುಡಿ, ಪರಶುರಾಮ ದುಮ್ಮಾಳ, ರೇಣಪ್ಪ ಇಂಗಳೆ, ಪರಶುರಾಮ ರಾಮಜಿ, ಭೀಮಪ್ಪ ಹಾಳಕೇರಿ, ಲಕ್ಷ್ಮಣ ಕಾಸಾಯಿ, ಕಲ್ಲಪ್ಪ ರಾಮಜಿ, ಪ್ರಕಾಶ ಕಲ್ಗುಡಿ, ಪರಸಪ್ಪ ಪವಾರ, ಪರಸಪ್ಪ ನಿಂಬೋಜಿ, ಶಿವಾಜಿ ಹಾಳಕೇರಿ, ಸಂತೋಷ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net