

ಮೈಸೂರು: ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕಂಪನಿ ಮುಖ್ಯಸ್ಥರಿಗೆ ಮೆಸೇಜ್ ಕಳುಹಿಸಿ ನಾಪತ್ತೆಯಾಗಿದ್ದ ಇಂಜಿನಿಯರ್ ಒಬ್ಬರು ಬುಧವಾರ ಮನೆಗೆ ಹಿಂತಿರುಗಿದ್ದಾರೆ.
ನಗರದ ಮೇದರ ಬ್ಲಾಕ್ ನಿವಾಸಿ ಸೈಯದ್ ಶರನ್(27) ಎಂಬವರೇ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದು ಮನೆಗೆ ಹಿಂತಿರುಗಿ ದವರು. ಸೈಯದ್ ಶರನ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಡಿಸೈನ್ ಇಂಜಿನಿಯರ್‌ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸೈಯದ್ ಶರನ್ ಫೆ.10 ರಂದು ಮನೆಗೆ ಆಗಮಿಸಿದ್ದರು. ಫೆ.11 ರಂದು ಮಟನ್ ತರುವುದಾಗಿ ಮನೆಯಿಂದ ಹೊರಟ ವ್ಯಕ್ತಿ ಹಿಂತಿರುಗಲಿಲ್ಲ. ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಕಂಪನಿ ಮುಖ್ಯಸ್ಥರಿಗೆ ಮೆಸೇಜ್ ಕಳುಹಿಸಿದ್ದರು. ಈ ವಿಚಾರವನ್ನು ಕಂಪನಿ ಮುಖ್ಯಸ್ಥರು ತಕ್ಷಣ ಮನೆಯವರ ಗಮನಕ್ಕೆ ತಂದರು. ಕುಟುಂಬದವರು ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಓದಿಗೆ ತಕ್ಕ ಉದ್ಯೋಗ ದೊರೆಯಲಿಲ್ಲ ಎಂಬ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದರು.