ಕುರಿಗಾಹಿ ಮಹಿಳೆ ಕೊಂದವನ ಸೆರೆ

CRIME
Published on

ಬೇತಮಂಗಲ: ಸಾಲ ತೀರಿಸಲು ಅಡ್ಡದಾರಿ ಹಿಡಿದ ಯುವಕನೊಬ್ಬ ಕುರಿಗಾಹಿ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ಮೈಮೇಲಿದ್ದ ಒಡವೆ ದೋಚಿದ್ದ ಆರೋಪದಲ್ಲಿ ಕಡೆಗೂ ಪೊಲೀಸರ ಖೆಡ್ಡಾಗೆ ಬಿದ್ದಿದ್ದಾನೆ.

ಕೆಜಿಎ್​ ತಾಲೂಕಿನ ಜಂಗಮಾನಹಳ್ಳಿಯ ನವೀನ್​ರೆಡ್ಡಿ (30) ಬಂಧಿತ. ಜಂಗಮನಹಳ್ಳಿ ಸುಶೀಲಮ್ಮ(45) ಕೊಲೆಯಾದ ಮಹಿಳೆ.

ಟನೆ ವಿವರ: ತಿಂಗಳ ಹಿಂದೆ ಕೆಜಿಎ್​ ತಾಲೂಕು ಜಂಗಮನಹಳ್ಳಿಯ ಸುಶೀಲಮ್ಮ(45) ಕುರಿ ಮೇಯಿಸಲೆಂದು ಹೋಗಿದ್ದರು. ಆದರೆ, ರಾತ್ರಿಯಾದರೂ ಮನೆಗೆ ಬಾರದೆ ಹಿನ್ನೆಲೆಯಲ್ಲಿ ಪತಿ ನಾರಾಯಣಪ್ಪ ಹುಡುಕಾಡಿದಾಗ ಗುಡ್ಡವೊಂದರ ಬಳಿ ಸುಶೀಲಮ್ಮ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ಹೃದಯಾಘಾತ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರಬಹುದು ಎಂದು ಮನೆಯವರು ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದರು. ಆದರೆ, ಗ್ರಾಮದ ಕೆಲವು ಮುಖಂಡರ ಸಲಹೆ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡಿ ಮೃತದೇಹವನ್ನು ಮರಣೋತ್ತರ ಪರೀೆ ಮಾಡಿಸಿ, ಅಂತ್ಯಸಂಸ್ಕಾರ ನಡೆಸಲಾಗಿತ್ತು.

ಕೆಲವು ದಿನಗಳ ಬಳಿಕ ಮಹಿಳೆಯ ಕತ್ತಿನಲ್ಲಿದ್ದ ಬಂಗಾರದ ತಾಳಿ, ಮಾಂಗಲ್ಯದೊಂದಿಗಿದ್ದ ಚಿನ್ನದ ಒಡವೆ ಮತ್ತು ಕಿವಿ ಓಲೆ ನಾಪತ್ತೆಯಾಗಿದ್ದ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಕ್ಯಾಸಂಬಳ್ಳಿ ಪೊಲೀಸ್​ ಠಾಣೆಯಲ್ಲಿ ನಾರಾಯಣಪ್ಪ ಪ್ರಕರಣ ದಾಖಲಿಸಿದ್ದರು. ಇದೇ ವೇಳೆಗೆ ಮಹಿಳೆಯನ್ನು ಉಸಿರುಗಟ್ಟಿ ಸಾಯಿಸಿರುವ ಅನುಮಾನ ವ್ಯಕ್ತಪಡಿಸಿ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಣ ಕೆಜಿಎ್​ ಜಿಲ್ಲಾ ರಣಾಧಿಕಾರಿ ಶಾಂತರಾಜು ಬೇತಮಂಗಲ ವೃತ್ತ ನಿರೀಕ ರಂಗಸ್ವಾಮಯ್ಯ ಸೇರಿ ಅಪರಾಧ ವಿಭಾಗದ ತಂಡದೊಂದಿಗೆ ಸಭೆ ನಡೆಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು.

ಹೌಹಾರಿದ ಪೊಲೀಸರು

ಪ್ರಕರಣದ ಜಾಡು ಹಿಡಿದ ಪೊಲೀಸರ ತಂಡ ಸುಮಾರು 15 ದಿನಗಳ ಕಾಲ ಹಲವು ಕಡೆ ತನಿಖೆ ನಡೆಸಲು ಮುಂದಾಗಿತ್ತಾದರೂ ಪ್ರಯೋಜನವಾಗಿರಲಿಲ್ಲ. ಕಡೆಗೆ, ಗಿರವಿ ಅಂಗಡಿ ಮಾಲೀಕರನ್ನು ಭೇಟಿಯಾಗಿ ವಿಚಾರಣೆ ನಡೆಸಿದಾಗ ಬೇತಮಂಗಲ ಗಿರವಿ ಅಂಗಡಿ ಒಂದರಲ್ಲಿ ಮಹಿಳೆಯ ಒಡವೆ ಪತ್ತೆಯಾಗಿವೆ. ಆಗ ಗಿರವಿ ಅಂಗಡಿಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ನಿಜವಾದ ಹಂತಕ ಅದೇ ಗ್ರಾಮದ ನವೀನ್​ರೆಡ್ಡಿ ಎಂಬುದನ್ನು ತಿಳಿದು ಪೊಲೀಸರೇ ಹೌಹಾರಿದ್ದರು.

ಮಹಿಳೆ ಕೊಲೆಯಾದ ದಿನದಿಂದ ಗ್ರಾಮಕ್ಕೆ ಬರುತ್ತಿದ್ದ ಪೊಲೀಸರ ಜತೆಯೇ ನವೀನ್​ರೆಡ್ಡಿ ಯಾವುದೇ ಸಂಶಯ ಬರದ ರೀತಿ ಇರುತ್ತಿದ್ದ. ಇದಕ್ಕೂ ಮೊದಲು ಮಹಿಳೆಯನ್ನು ಹುಡುಕಾಡಲು ಹೋಗಿದ್ದಾಗಲೂ ಜತೆಯಲ್ಲಿದ್ದ. ಅಂತ್ಯಕ್ರಿಯೆಯಲ್ಲೂ ದು@ಖದಿಂದಲೇ ಭಾಗಿಯಾಗಿದ್ದ.

ಬೆಂಗಳೂರು ಸೇರಿದ್ದ ಆರೋಪಿ

ಕೊಲೆ ನಡೆದು ಸುಮಾರು 15 ದಿನಗಳ ಕಾಲ ಗ್ರಾಮದಲ್ಲೆ ಓಡಾಡಿಕೊಂಡಿದ್ದ ಆರೋಪಿ ಪ್ರಕರಣ ದಾಖಲಾಗುತ್ತಿದ್ದಂತೆ, ಹಳ್ಳಿ ಬಿಟ್ಟು ಬೆಂಗಳೂರು ಸೇರಿದ್ದ. ಕೆಜಿಎ್​ ಜಿಲ್ಲಾ ರಣಾಧಿಕಾರಿ ಶಾಂತರಾಜು, ಡಿವೈಎಸ್ಪಿ ಪಾಂಡುರಂಗ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬೆಂಗಳೂರಿನಿಂದ ಹಳ್ಳಿಗೆ ಬರುವಂತೆ ಮಾಡಿ ಬಂಧಿಸಿದ್ದಾರೆ.

ಟವಲ್​ನಿಂದ ಉಸಿರುಗಟ್ಟಿಸಿ ಕೊಲೆ

ಆರೋಪಿ ನವೀನ್​ರೆಡ್ಡಿ ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದ. ಸಾಕಷ್ಟು ಸಾಲ ಮಾಡಿಕೊಂಡಿದ್ದೆ, ಆಕೆಯ ಮೈಮೇಲೆ ಬಂಗಾರ ಒಡವೆಗಳು ಇರುವುದು ಗೊತ್ತಿತ್ತು. ಆದ್ದರಿಂದ ಹಿಂದಿನಿಂದ ಹೋಗಿ ಕೆಳಕ್ಕೆ ತಳ್ಳಿ ಟವೆಲ್​ ಮೂಲಕ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಒಡವೆ ದೋಚಿಕೊಂಡು ಗಿರವಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ಕ್ಯಾಸಂಬಳ್ಳಿ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳಿಸಿದ್ದಾರೆ.

"ಮಹಿಳೆಯ ಕೊಲೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೆವು. ತನಿಖೆಯ ವೇಳೆ ಪ್ರಾರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ, ನಂತರ ತನಿಖಾ ತಂಡ ಬಹಳ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ."

- ಶಾಂತರಾಜು

ಕೆಜಿಎ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

"ಆರೋಪಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು, ಅದನ್ನು ತೀರಿಸಲು ಸುಶೀಲಮ್ಮ ಅವರನ್ನು ಕೊಲೆ ಮಾಡಿ ಒಡವೆ ದೋಚಿ ಗಿರವಿ ಇಟ್ಟು ಆರಾಮವಾಗಿದ್ದ. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಬರುತ್ತಾರೆ ಎಂಬ ಅನುಮಾನದಿಂದ ಪರಾರಿ ಆಗಿದ್ದ. ಸ್ವಲ್ಪ ನಿಧಾನವಾದರೂ ಹಿರಿಯ ಪೊಲೀಸ್​ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ."

- ರಂಗಸ್ವಾಮಯ್ಯ

ಬೇತಮಂಗಲ ವೃತ್ತ ನಿರೀಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net