

ಸರ್ಜಾಪುರ : ಸರ್ದಾರ್ ಪಟೇಲ್ ಅವರು ಭಾರತದ ಭೌಗೋಳಿಕ ಏಕತೆಯನ್ನು ಸಾಧಿಸಿದ ಮಹಾನ್ ನಾಯಕರು. ಇಂದು ಅವರ ತತ್ವ, ಧೈರ್ಯ ಮತ್ತು ರಾಷ್ಟ್ರಪ್ರೇಮದ ಆದರ್ಶಗಳನ್ನು ವಿದ್ಯಾರ್ಥಿಗಳು ಅರಿತು ಅನುಸರಿಸಬೇಕಾಗಿದೆ ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ವಿದ್ಯಾ ಸಂಸ್ಥೆಯ ಖಜಾಂಚಿ ನಾಗರಾಜ ಶೆಟ್ಟಿ ತಿಳಿಸಿದರು. ಪಟ್ಟಣದ ಸರ್ದಾರ್ ವಲ್ಲಭಭಾಯಿ ಪಟೇಲ್ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜಯಂತಿಯಲ್ಲಿ ಮಾತನಾಡಿದರು. ಸರ್ದಾರ್ ವಲ್ಲಭ ಬಾಯ್ ಪಟೇಲ್ ವಿದ್ಯಾ ಸಂಸ್ಥೆಯ ನಿರ್ದೇಶಕ ನಾರಯಣಸ್ವಾಮಿ ಮಾತನಾಡಿ, ಪಟೇಲ್ ಅವರು ಅಧಿಕಾರಕ್ಕಾಗಿ ಅಲ್ಲ, ರಾಷ್ಟ್ರದ ಏಕತೆಗಾಗಿ ಬದುಕಿದ ವ್ಯಕ್ತಯಾಗಿದ್ದು, ಇಂದಿನ ಯುವ ಪೀಳಿಗೆ ಅವರ ತ್ಯಾಗ ಮತ್ತು ಹೋರಾಟಗಳನ್ನು ಸ್ಫೂರ್ತಿಯಾಗಿ
ಪಡೆದು ಮುನ್ನೆಡೆಯಬೇಕು ಎಂದರು.
ಜಯಂತಿಯ ಅಂಗವಾಗಿ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಭಾರತದ ಏಕತೆಯಲ್ಲಿ ಸರ್ದಾರ್ ಪಟೇಲ್ ಅವರ ಪಾತ್ರ ಮತ್ತು ಯುವ ಪೀಳಿಗೆಯ ಆದರ್ಶ ನಾಯಕ ಪಟೇಲ್ ಎಂಬ ವಿಷಯಗಳ ಕುರಿತು ವಿದ್ಯಾರ್ಥಿಗಳು ಭಾಷಣ ಮಾಡಿದರು. ಸ್ಪರ್ಧೆಯಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿಜೇತರಿಗೆ ಬಹುಮಾನ ಗಳನ್ನು ನೀಡಲಾಯಿತು. ಪ್ರೌಢಶಾಲೆಯ ಮುಖ್ಯ ಶಿಕಿ ಕೆ.ಶೈಲಜಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕಿ ಅರ್ಚನಾ, ಶಿಕರಾದ ಎ.ಪಾಪಣ್ಣ, ಬಿ.ಎಂ.ಹರೀಶ್, ಬಿ.ಎನ್ ಮಂಜುಳಾ, ಜಗದೀಶ್, ಎಂ. ನಾಗರಾಜು, ಗ್ರಂಥಪಾಲಕ ಕೃಷ್ಣಮೂರ್ತಿ ಇದ್ದರು.