

ಇಳಕಲ್ಲ: ಎಲೆಮರೆ ಕಾಯಿಯಂತಿರುವ ನೈಜ ಕಲಾವಿದರನ್ನು ಬೆಳಕಿಗೆ ತರುವುದೇ ಕರ್ನಾಟಕ ಜಾನಪದ ಪರಿಷತ್‌ನ ಮೂಲ ಉದ್ದೇಶ ಎಂದು ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ ಹೇಳಿದರು.
ತಾಲೂಕಿನ ಕರಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಜನಪದ ಸಂಭ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೋಗುಳ ಪದ, ಲಾವಣಿ, ಹಂತಿ ಪದಗಳನ್ನು ದಾಖಲಿಸಿಕೊಂಡು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಈ ನಾಡಿನ ಪರಂಪರೆ, ಸಂಸ್ಕೃತಿಯ ಅರಿವು ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಜಾಪ ತಾಲೂಕು ಅಧ್ಯಕ್ಷ ಚನ್ನಬಸಪ್ಪ ಲೆಕ್ಕಿಹಾಳ, ಜನರ ಎದೆಯ ಭಾವದಿಂದ ಜನಜನಿತವಾದ ಜನಪದ ಸಾಹಿತ್ಯವು ಹಳ್ಳಿ ಸೊಗಡಿನ ಮೂಲ ಸಂಸ್ಕೃತಿಯ ಆಕರವಾಗಿದೆ ಎಂದರು.
ಪ್ರೌಢಶಾಲೆ ಮುಖ್ಯಗುರು ಹನುಮಪ್ಪ ಚಿತ್ತವಾಡಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಜಾಪ ಕಾರ್ಯದರ್ಶಿ ಆರ್.ಬಿ.ನಬಿವಾಲೆ, ಖಜಾಂಚಿ ಸುರೇಶ ವಸದ, ಹುನಗುಂದ ಕಜಾಪ ಅಧ್ಯಕ್ಷ ಬಿ.ಡಿ ಚಿತ್ತರಗಿ, ಎಂ.ಆರ್. ಪಾಟೀಲ, ಗ್ರಾ.ಪಂ. ಅಧ್ಯಕ್ಷ ಶರಣಪ್ಪ ಕನಸಾವಿ, ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಸಜ್ಜನ ಗ್ರಾ.ಪಂ ಪಿಡಿಒ ಆರ್. ಎಂ. ಮುದಗಲ್ಲ, ರಾಮಕೃಷ್ಣ ಹಂಚಾಟೆ, ಮಲ್ಲಪ್ಪ ಅಂಗಡಿ, ವೈಶಾಲಿ ಘಂಟಿ, ಸುಜಾತ ಅಂಗಡಿ, ಕಲ್ಪನಾ ಗಜೇಂದ್ರಗಡ, ನಂದಾ ನಾಗಶೆಟ್ಟಿ, ಬಸಮ್ಮ ಕರ್ಲಿ, ವಿದ್ಯಾ ಹಡಗಲಿ, ಸುಮಾ ಶೀಲವಂತರ, ನಿಂಗಮ್ಮ ಬೇವೂರ, ಅಶೋಕ ಬೇವಿನಮಟ್ಟಿ, ಗಣೇಶ ಕುಪಸ್ತ ಉಪಸ್ಥಿತರಿದ್ದರು.
ಸೌಜನ್ಯ ಗೌಡರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕರಡಿ ಹೋಬಳಿ ಘಟಕದ ಅಧ್ಯಕ್ಷ ಮಹಾಂತೇಶ ಅಂಗಡಿ ಸ್ವಾಗತಿಸಿದರು. ನಾಗಪ್ಪ ಲಮಾಣಿ ವಂದಿಸಿದರು. ಎಚ್.ಬಿ ಕಂಬಳಿ ನಿರೂಪಿಸಿದರು.
ಸಾಧಕರಿಗೆ ಸತ್ಕಾರ : ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಮಹಾದೇವ ಕಂಬಾಗಿ ಹಾಗೂ ಗಂಗೂಬಾಯಿ ಆರೇರ, ಮಹಾಂತೇಶ ಗೊರಜನಾಳ, ಎಚ್.ಎಸ್.ಗೌಡರ, ಚಿನ್ನಪ್ಪ ಇಂಜಿನಿಯರ್, ವೆಂಕನಗೌಡ ಗೌಡರ, ಅರುಂಧತಿ, ವೆಂಕನಗೌಡ ಗೌಡರ, ಮುತ್ತು ಕರಮಡಿ, ಈರಣ್ಣ ಕುಂದರಗಿಮಠ, ಅಮರೇಶ ಐಹೊಳ್ಳಿ, ಆನಂದ ದೇವಗಿರಿಕರ ಅವರನ್ನು ಸನ್ಮಾನಿಸಲಾಯಿತು.