ಸೀರೆ ಗೆದ್ದ ಅದೃಷ್ಟಶಾಲಿ ನಾರಿಯರು

1
ನೆಲಮಂಗಲ ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಬಸವೇಶ್ವರ ಮಹಿಳಾ ಪ್ರಥಮದರ್ಜೆ ಕಾಲೇಜಿನ ಹಮ್ಮಿಕೋಂಡಿದ್ದ ‘ನಾರಿ ನಿನಗೊಂದು ಸ್ಯಾರಿ’ ರಸಪ್ರಶ್ನೆಯ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಪೂರ್ಣಿಮಾ ಸುಗ್ಗರಾಜು ಆಯ್ಕೆ ಮಾಡಿದರು. ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಜಯಲತಾ, ಸುಷ್ಮಾ, ಸಂದ್ಯಾ, ತೇಜಸ್ವಿನಿ, ಸುಮಿತ್ರಾ, ಭವ್ಯಾ, ರೂಪಿಣಿ, ಆಲಿಸ್ಮ, ಮಮತಾ, ಪತ್ರಿಕಾ ವಿತರಕ ಆರ್.ಪ್ರಮೋದಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Published on

‘ವಿಜಯವಾಣಿ’ ಓದುಗರಿಗಾಗಿ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ವಿಶೇಷ ಕಾರ್ಯಕ್ರಮ

ನೆಲಮಂಗಲ: ಮಹಿಳಾ ಓದುಗರನ್ನು ಕೇಂದ್ರೀಕರಿಸಿಕೊಳ್ಳುವ ಜತೆಗೆ ಮಹಿಳೆಯರಲ್ಲಿ ಓದುವ ಆಸಕ್ತಿ ಮೂಡಿಸುವಲ್ಲಿ ‘ವಿಜಯವಾಣಿ’ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಎಂಬ ಕಾರ್ಯಕ್ರಮ ವಿಶೇಷ ಪ್ರಯತ್ನವಾಗಿದೆ ಎಂದು ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಎನ್.ಎಸ್.ಪೂರ್ಣಿಮಾ ಸುಗ್ಗರಾಜು ತಿಳಿಸಿದರು.

ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನಾರಿ ನಿನಗೊಂದು ಸ್ಯಾರಿ’ ರಸಪ್ರಶ್ನೆಯಲ್ಲಿ ತಾಲೂಕಿನ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಸೀರೆಗೆ ವಿಶೇಷ ಸ್ಥಾನಮಾನವಿದೆ. ಮಹಿಳೆಯರು ಸೀರೆಯನ್ನು ಬಂಗಾರಕ್ಕಿಂತ ಹೆಚ್ಚು ಇಷ್ಟಪಡುತ್ತಾರೆ. ಅದು ಸಂಸ್ಕೃತಿಯ ಪ್ರತೀಕ. ನಾರಿ ನಿನಗೊಂದು ಸ್ಯಾರಿ ಕಾರ್ಯಕ್ರಮದ ಮೂಲಕ ಮಹಿಳೆಯರ ಆಸಕ್ತಿ ಹಾಗೂ ಸಾಮಾನ್ಯ ಜ್ಞಾನ ಹೆಚ್ಚಿಸುವ ಜತೆಗೆ ಪತ್ರಿಕೆ ಓದುವ ಹವ್ಯಾಸ, ಹಲವು ವಿಷಯ ತಿಳಿದುಕೊಳ್ಳುತ್ತಿದ್ದೇವೆ ಎಂಬ ವಿಶ್ವಾಸ ಮೂಡಿಸಿದೆ. ಪತ್ರಿಕೆಯಲ್ಲಿ ಬರುವ ಹೊಸತನದ ವಿಚಾರ ಮನನ ಮಾಡಿಕೊಳ್ಳಬೇಕು. ಅಲ್ಲದೆ ಎಲ್ಲರನ್ನೂ ಜಾಗೃತಿಗೊಳಿಸಿದ ‘ವಿಜಯವಾಣಿ’ಯ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

ಉಪನ್ಯಾಸಕಿ ವನಜಾಕ್ಷಿ ಮಾತನಾಡಿ, ಪತ್ರಿಕೆಯಲ್ಲಿ ಹೆಡ್‌ಲೈನ್ ಅಷ್ಟೇ ಓದುವ ಬದಲು ಎಲ್ಲ ವಿಷಯ ಸವಿಸ್ತಾರವಾಗಿ ತಿಳಿದುಕೊಳ್ಳಲು ‘ವಿಜಯವಾಣಿ’ ರಸಪ್ರಶ್ನೆ ಕಾರ್ಯಕ್ರಮ ಪೂರಕವಾಗಿದೆ. ಮಹಿಳೆಯರಿಗೆ ಸೀರೆ ಎಂದಿಗೂ ಅಚ್ಚುಮೆಚ್ಚು. ಮಹಿಳೆಯರಿಗೆ ಸಾಮಾನ್ಯ ಜ್ಞಾನ ಹೆಚ್ಚುವ ನಿಟ್ಟಿನಲ್ಲಿ ಪ್ರತಿಕೋದ್ಯಮದಲ್ಲಿ ದಿಟ್ಟ ಹೆಜ್ಜೆ ಹಾಕಿರುವ ವಿಜಯವಾಣಿ ಕಾರ್ಯ

ಮಹತ್ವವಾದದ್ದು ಎಂದರು.

ಬಹುಮಾನ ವಿಜೇತರು

ನಗರದ ಸೊಂಡೇಕೊಪ್ಪ ಮುಖ್ಯರಸ್ತೆ ಹೊನ್ನಗಂಗಯ್ಯನಪಾಳ್ಯ ಎ.ಸುಮಿತ್ರಾ, ಸೋಂಪುರ ಹೋಬಳಿ ಬಿಲ್ಲಿನಕೋಟೆ ಸರೋಜಮ್ಮ, ರೇಣುಕಾ ನಗರ ಮಲ್ಲಪ್ಪ ಬಡಾವಣೆ ಪಿ.ಪುಷ್ಪಾವತಿ, ನಗರದ ಪರಮಣ್ಣ ಬಡಾವಣೆಯ ತುಮಕೂರು ವೀರಶೈವ ಬ್ಯಾಂಕ್‌ನ ಎಸ್.ಆಶಾ, ಮುನೇಶ್ವರ ಬಡಾವಣೆ ಶಿಕ್ಷಕಿ ಜಯಂತಿ ಸೇರಿ ಐವರು ಮಹಿಳೆಯರು ಈ ಬಾರಿ ಸ್ಪರ್ಧೆಯ ಅದೃಷ್ಟಶಾಲಿಗಳಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net