ಅಭಿಮಾನಿಗಳ ಪ್ರೀತಿಯೇ ಕಲಾವಿದರಿಗೆ ರಕ್ಷೆ

18 ckm 4
ಚಿಕ್ಕಮಗಳೂರಿನ ಕಲ್ಕಟ್ಟೆ ಪುಸ್ತಕ ಮನೆಯಿಂದ ಹಿರಿಯ ಚಿತ್ರನಟ ರಮೇಶ್ ಭಟ್ ಅವರನ್ನು ಸನ್ಮಾನಿಸಲಾಯಿತು. ನಾಗರಾಜ ರಾವ್ ಕಲ್ಕಟ್ಟೆ, ರೇಖಾ ನಾಗರಾಜ ರಾವ್, ಸೌಮ್ಯಕೃಷ್ಣ, ಸುನೀತಾ, ರಾಜೀವಿ, ನಾಗೇಂದ್ರ, ಮೀರಾ, ಅನುಪಮಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕಲಾ ದೇವತೆ ಒಲಿದಾಗ ಅವಳ ಸೇವೆಯನ್ನು ನಿಷ್ಟೆಯಿಂದ ನಡೆಸಬೇಕು. ಜನರ ಪ್ರೀತಿ ಅಭಿಮಾನಗಳು ಕಲಾವಿದರಿಗೆ ಶ್ರೀರಕ್ಷೆ ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್ ಭಟ್ ತಿಳಿಸಿದರು.

ನಗರದ ಕಲ್ಕಟ್ಟೆ ಪುಸ್ತಕದ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಲೆನಾಡಿಗೆ ನಾನು ಹಲವಾರು ವರ್ಷಗಳಿಂದ ಬರುತ್ತಿz್ದೆÃನೆ. ಇಲ್ಲಿನ ಜನರ ಪ್ರೀತಿ ನಿಷ್ಕಲ್ಮಶವಾದುದು. ಸಿನಿ ಜೀವನದಲ್ಲಿ ಜನಪ್ರಿಯತೆ ದೊರೆಯುತ್ತದೆ. ಆದರೆ, ಕಲಾವಿದ ನಿಜ ಬದುಕಿನಲ್ಲಿಯೂ ಸಾತ್ವಿಕನಾಗಿದ್ದಾಗ ಮಾತ್ರ ಆತನ ಕುರಿತಾದ ಅಭಿಮಾನಕ್ಕೆ ಮನ್ನಣೆ ದೊರೆಯುತ್ತದೆ ಎಂದರು.
ಕಲ್ಕಟ್ಟೆ ಪುಸ್ತಕದ ಮನೆ ಚಿಕ್ಕಮಗಳೂರಿನ ಸಾಂಸ್ಕೃತಿಕ ಕೇಂದ್ರದAತಾಗಿದೆ. ಈ ಮನೆಯ ಮಗಳು ವೈಷ್ಣವಿ ನನ್ನೊಂದಿಗೆ ಸಿನೆಮಾವೊಂದರಲ್ಲಿ ಅಭಿನಯಿಸಿರುವುದು ಸಂತೋಷದ ಸಂಗತಿ. ಕಲಾರಾಧನೆ ಎಂದರೆ ಸರಸ್ವತಿ ಸೇವೆ ಎಂದು ಅವರು ತಿಳಿಸಿದರು.
ರಿಚ್ಮಂಡ್ ಕನ್ನಡ ಸಂಘದ ಕಾರ್ಯದರ್ಶಿ ಸೌಮ್ಯಕೃಷ್ಣ ಮಾತನಾಡಿ, ಕಲಾವಿದರು ವಿಶ್ವದೆಲ್ಲೆಡೆ ಗೌರವಕ್ಕೆ ಪಾತ್ರರಾಗುತ್ತಾರೆ. ಕಲೆ ಮನುಷ್ಯನನ್ನು ಪೂರ್ಣತೆಯೆಡೆಗೆ ಕರೆದೊಯ್ಯುತ್ತದೆ ಎಂದರು.
ಕಲ್ಕಟ್ಟೆ ಪುಸ್ತಕದ ಮನೆಯ ವ್ಯವಸ್ಥಾಪಕಿ ರೇಖಾ ನಾಗರಾಜರಾವ್ ಮಾತನಾಡಿ, ಯಾವುದೇ ಸಂಘ ಸಂಸ್ಥೆ, ಮನೆಗಳಿಗೆ ಸಜ್ಜನರು ಬಂದರೆ ಅದರ ಸಂಸ್ಕೃತಿಗೆ ಗರಿ ಇಟ್ಟಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಸುನೀತಾ, ರಾಜೀವಿ ವಿಠಲ್, ಬಾಟಾ ನಾಗೇಂದ್ರ, ಮೀರಾ, ಅನುಪಮಾ, ಲತಾ, ಕಮಲಾಕ್ಷಿ, ರೊನಾಲ್ಡ್, ಸುಶೀಲಮ್ಮ, ಶ್ರೀಕರ , ಕೇದಾರ್, ನಾಗರಾಜ್‌ರಾವ್ ಕಲ್ಕಟ್ಟೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net