ಜನರ ಪ್ರೀತಿ, ವಿಶ್ವಾಸಗಳಿಸಿದ ತೃಪ್ತಿ

8 ckm 4 (1)
ಚಿಕ್ಕಮಗಳೂರಿನ ಸಾಂತವೇರಿ ಗ್ರಾಮದಲ್ಲಿ ವರ್ಗಾವಣೆಗೊಂಡ ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರಘುನಂದನ್ ಅವರನ್ನು ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು. ಜನಾರ್ಧನ್, ಮುಬಾರಕ್, ಎಸ್.ಎ.ಕೃಷ್ಣಪ್ಪ, ದೇವರಾಜ್, ಕೆಂಪರಾಜ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಗ್ರಾಮದ ಜನರ ಪ್ರೀತಿ, ವಿಶ್ವಾಸಗಳಿಸಿ ಕೆಲಸ ಮಾಡಿದಾಗ ಮಾತ್ರ ತೃಪ್ತಿ ಸಿಗುತ್ತದೆ ಎಂದು ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರಘುನಂದನ್ ತಿಳಿಸಿದರು.
ಸಾಂತವೇರಿ ಗ್ರಾಮದ ಗ್ರಂಥಾಲಯ ಆವರಣದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಬ್ಯಾಂಕ್ ವ್ಯವಸ್ಥಾಪಕನಾಗಿ ಬಂದ ನಂತರ ಗ್ರಾಮಸ್ಥರ ಮತ್ತು ರೈತರ ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ಸಾಂತವೇರಿ ಗ್ರಾಮದಲ್ಲಿ ವ್ಯವಸ್ಥಾಪಕನಾಗಿ ಸೇವೆ ಸಲ್ಲಿಸಿ, ಈಗ ಬೇರೆಡೆಗೆ ವರ್ಗಾವಣೆ ಹೊಂದಿದ್ದೇನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಗ್ರಾಹಕರಿಗೆ ಹಾಗೂ ರೈತರಿಗೆ ಒದಗಿಸಿ, ಅವರ ನೆರವಿಗೆ ನಿಂತಿರುವುದು ಸಂತೋಷ ತಂದಿದೆ ಎಂದರು. ಗ್ರಾಮದಲ್ಲಿ ಎಲ್ಲರ ಸಹಕಾರ ದೊರೆತಿದ್ದು, ಒಂದು ಕುಟುಂಬದವರಂತೆ ಕೆಲಸ ಮಾಡಿದ್ದೇನೆ. ಬ್ಯಾಂಕ್‌ನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ನಿಮ್ಮೆಲ್ಲರ ಸಹಕಾರ ಅತ್ಯಮೂಲ್ಯವಾಗಿ ಸಿಕ್ಕಿತ್ತು. ಅದೇ ರೀತಿ ಮುಂದೆ ಬರುವವರಿಗೂ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಕಾಮನದುರ್ಗ ಗ್ರಾಪಂ ಸದಸ್ಯರಾದ ಜನಾರ್ಧನ್, ಮುಬಾರಕ್, ತಾಪಂ ಮಾಜಿ ಸದಸ್ಯ ಎಸ್.ಎ.ಕೃಷ್ಣಪ್ಪ, ಕಾಮನದುರ್ಗ ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ್, ರೈತ ಮುಖಂಡರಾದ ಕೆಂಪರಾಜ್, ಭೀಮಾನಾಯ್ಕ, ಗ್ರಾಮಸ್ಥರಾದ ಅಶೋಕ್, ಕುಮಾರ್, ರುದ್ರಪ್ಪ, ರಜನಿ, ಲೈಬ್ರರಿ ಮಂಜು, ಎಮಿಲ್ಡಾ ಪಾಯಿಸ್, ಮಂಜುಳಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net