ಹಿನ್ನೀರಿಗೆ ಜಾರಿ ಹೋದ ಲಾರಿ

SHARAVATHI
Published on

ಬ್ಯಾಕೋಡು: ಹೊಳೆಬಾಗಿಲು ಶರಾವತಿ ಹಿನ್ನೀರಿನಲ್ಲಿ ಗುರುವಾರ ಸಂಜೆ 10 ಚಕ್ರದ ಲಾರಿಯೊಂದು ಮುಳುಗಿದ್ದು ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಲಾರಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಡಿಬಿಎಲ್ ಕಂಪನಿಗೆ ಸೇರಿದ್ದು ಕಾಮಗಾರಿಗಾಗಿ ಜೆಲ್ಲಿ ತುಂಬಿಕೊಂಡು ಬರಲಾಗಿತ್ತು. ಇದನ್ನು ಲಾಂಚ್ ಮೂಲಕ ಕಳಸವಳ್ಳಿ ದಡಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ಲಾಂಚ್ ಬರುವುದು ತಡವಿದ್ದರಿಂದ ಚಾಲಕ ಅಂಬಾರಗೊಡ್ಲು ದಡದಲ್ಲಿ ಲಾರಿಯನ್ನು ಹಿಮ್ಮುಖವಾಗಿ ನಿಲ್ಲಿಸಿ ಕೆಳಗಿಳಿದಿದ್ದು ಸಡನ್ ಆಗಿ ಲಾರಿ ಹಿನ್ನೀರಿಗೆ ಜಾರಿ ಹೋಗಿ ಸಂಪೂರ್ಣ ಮುಳುಗಿದೆ. ಬಳಿಕ ಕ್ರೇನ್ ಬಳಸಿ ಮೇಲಕ್ಕೆ ಎತ್ತಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net