ಮನೆ ಮೇಲೆ ಬಿದ್ದ ಲಾರಿ

Lorry
Published on

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಮನೆಯ ಮೇಲೆ ಉರುಳಿ ಬಿದ್ದ ಘಟನೆ ಶುಕ್ರವಾರ ಮಧ್ಯರಾತ್ರಿ ವೇಳೆ ವಗ್ಗ ಸಮೀಪದ ಬಾಂಬಿಲದಲ್ಲಿ ನಡೆದಿದೆ. ಬಿ.ಸಿ.ರೋಡು ಕಡೆಯಿಂದ ಪುಂಜಾಲಕಟ್ಟೆ ಕಡೆಗೆ ಮಧ್ಯರಾತ್ರಿ 1 ಗಂಟೆ ವೇಳೆಗೆ ಸಂಚರಿಸುತ್ತಿದ್ದ ವೇಳೆ ಬಾಂಬಿಲ ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮನೆ ಮೇಲೆ ಉರುಳಿ ಬಿದ್ದಿದೆ. ಇದರಿಂದಾಗಿ ಮನೆ ಮುಂಭಾಗಕ್ಕೆ ಹಾಕಲಾಗಿದ್ದ ಶೀಟ್‌ಗೆ ಹಾನಿ ಉಂಟಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶನಿವಾರ ಲಾರಿಯನ್ನು ತೆರವುಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net