ದೇವಸ್ಥಾನ ಬೀಗ ಒಡೆದು ಹುಂಡಿ ಕಳವು

17 mlv 3
Published on

ಮಳವಳ್ಳಿ: ಪಟ್ಟಣದ ಹೊರವಲಯದ ಮದ್ದೂರು ಮಳವಳ್ಳಿ ಮುಖ್ಯ ರಸ್ತೆ ಬದಿಯಲ್ಲಿರುವ ದಂಡಿನಮಾರಮ್ಮ ದೇವಸ್ಥಾನದ ಸೋಮವಾರ ರಾತ್ರಿ ಬೀಗ ಒಡೆದು ದೇವರ ಹುಂಡಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ.


ದೇವಸ್ಥಾನದ ಹಿಂಭಾಗದಲ್ಲಿ ಅಳವಡಿಸಿರುವ ಕಬ್ಬಿಣದ ಕಿಟಕಿಯ ರಾಡ್ ಕತ್ತರಿಸಿ ಒಳನುಸುಳಿರುವ ಕಳ್ಳರು ನಂತರ ಗರ್ಭಗುಡಿಯ ಬಾಗಿಲಿಗೆ ಹಾಕಲಾಗಿದ್ದ ಬೀಗ ಒಡೆದು ದೇವರ ಮುಂದೆ ಇರಿಸಲಾಗಿದ್ದ ಹುಂಡಿಯನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.


ಈ ಹಿಂದೆಯೂ ಈ ದೇವಸ್ಥಾನದಲ್ಲಿ ಕಳ್ಳತವಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net