

ಮದ್ದೂರು: ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಶ್ರೀಬನ್ನೂರಮ್ಮ ದೇವಸ್ಥಾನದ ಬೀಗ ಒಡೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ ದೋಚಿದ್ದಾರೆ. ಹುಂಡಿ ಹಣ ಅಂದಾಜು 20 ಸಾವಿರ ರೂ., 80 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
2019ರಲ್ಲಿ ಉದ್ಘಾಟನೆಯಾದ ದೇವಾಲಯದಲ್ಲಿ ಈವರೆಗೆ 6 ಬಾರಿ ಕಳ್ಳತನ ನಡೆದಿದೆ. ದೇಗುಲದಲ್ಲಿ ಕಳ್ಳತನ ಮಾಡಿದ ಕಳ್ಳರ ಕೈಚಳಕದ ವಿಡಿಯೊ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.