ದೇಗುಲದ ಬೀಗ ಮುರಿದು ಹುಂಡಿ ಹಣ ಕಳವು

images
Published on

ಚೇಳೂರು: ತಾಲೂಕಿನ ಪುಲಗಲ್ ಗ್ರಾಪಂನ ರಾಗಿಮಾಕಲಪಲ್ಲಿ ಗ್ರಾಮದಲ್ಲಿ ಶನಿವಾರ ರಾತ್ರಿ ಗ್ರಾಮದೇವತೆ ಬುರುಜು ಗಂಗಮ್ಮ ದೇವಾಲಯದ ಬೀಗ ಮುರಿದು ಹುಂಡಿ ಹಣ ಕಳವು ಮಾಡಲಾಗಿದೆ. ಭಾನುವಾರ ಬೆಳಗ್ಗೆ ಅರ್ಚಕ ಪೂಜೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಅರ್ಚಕ ಆರ್.ಇ. ಸುಬ್ಬಾರೆಡ್ಡಿ ಹಾಗೂ ಗ್ರಾಮಸ್ಥರು ಚೇಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಮುಖ್ಯ ಪೇದೆ ಚೌಡಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net