ಮೈಸೂರು: ಮನೆಯ ಚಪ್ಪಲಿ ಸ್ಟಾೃಂಡ್‌ನಲ್ಲಿಟ್ಟಿದ್ದ ಮನೆ ಕೀ ಬಳಸಿ ಬಾಗಿಲು ತೆಗೆದಿರುವ ಕಳ್ಳರು 2.47 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.
ತಿಲಕ್‌ನಗರದ ವಿನುತಾ ಅವರು ತಮ್ಮ ತಾಯಿ ಕಲಾವತಿ ಅವರೊಂದಿಗೆ ವಾಸವಾಗಿದ್ದರು. ಹೊರಗೆ ಹೋಗಬೇಕಾದರೆ ಮನೆಯ ಕೀ ಅನ್ನು ಚಪ್ಪಲಿ ಸ್ಟ್ಯಾಂಡ್‌ನಲ್ಲಿರುವ ಶೂ ಒಳಗಡೆ ಇಟ್ಟು ಹೋಗುತ್ತಿದ್ದರು.
ಅ.30ರಂದು ಕೀ ಅನ್ನು ಶೂ ಒಳಗಡೆ ಇಟ್ಟು ಹೊರಗೆ ತೆರಳಿದ್ದರು. ಈ ಬಗ್ಗೆ ತಿಳಿದಿದ್ದ ಖದೀಮರು ಚಪ್ಪಲಿ ಸ್ಟ್ಯಾಂಡ್‌ನಲ್ಲಿದ್ದ ಕೀ ಎತ್ತಿಕೊಂಡು ಬಾಗಿಲು ತೆಗೆದು ಒಳ ನುಗ್ಗಿ ಡ್ರಾಯರ್‌ನಲ್ಲಿಟ್ಟಿದ್ದ 30 ಗ್ರಾಂ ಚಿನ್ನಾಭರಣ, 6 ಸಾವಿರ ರೂ.ನಗದು ಹಾಗೂ ಒಂದು ಸಾವಿರ ರೂ.ಮೌಲ್ಯದ ಬೆಳ್ಳಿ ಸರವನ್ನು ಕಳವು ಮಾಡಿದ್ದಾರೆ ಎಂದು ಮನೆ ಮಾಲೀಕರಾದ ವಿನುತಾ ದೂರು ನೀಡಿದ್ದು, ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.