ಮೃತಪಟ್ಟವನನ್ನು ಕೆರೆಯಲ್ಲಿ ಹೂತಿದ್ದ ಲೈನ್​ಮನ್​ !

Published on

ಬಂದಾರ್ಲಹಳ್ಳಿ ಕೆರೆಯಲ್ಲಿ ಮುಚ್ಚಿ ಆಂಧ್ರಕ್ಕೆ ಪರಾರಿಯಾಗಿದ್ದ ಆರೋಪಿ

ವಿಜಯವಾಣಿ ಸುದ್ದಿಜಾಲ ಗುಡಿಬಂಡೆ

ಕಳೆದೆರಡು ದಿನಗಳ ಹಿಂದೆಯಷ್ಟೇ ವಿದ್ಯುತ್​ ಕೆಲಸ ಮಾಡುವ ವೇಳೆ ವಿದ್ಯುತ್​ ತಗುಲಿ ಮೃತಪಟ್ಟಿದ್ದ ರವಿ (32) ಮೃತದೇಹವನ್ನು ಯಾರಿಗೂ ತಿಳಿಸದಂತೆ ಲೈನ್​ಮನ್​ ಚಂದ್ರಶೇಖರ್​ ಬೀಚಗಾನಹಳ್ಳಿ ಸಮೀಪದ ಬಂದಾರ್ಲಹಳ್ಳಿ ಕೆರೆಯಲ್ಲಿ ಹೂತು ಪರಾರಿಯಾಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

ಗುಡಿಬಂಡೆ ಮೃತ ರವಿ ಮನೆಯವರು ಗುಡಿಬಂಡೆ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು ಲೈನ್​ಮನ್​ ಚಂದ್ರಶೇಖರ್​ ಮೇಲೆ ಅನುಮಾನಗೊಂಡು ಮೊಬೈಲ್​ ನೆಟ್​ವರ್ಕ್​ ಪರಿಶೀಲಿಸಿದಾಗ ಆತ ಮೊಬೈಲ್​ ಮನೆಯಲ್ಲಿ ಬಿಟ್ಟು ಪರಾರಿಯಾಗಿದ್ದ. ಬುಧವಾರ ಆಂಧ್ರಪ್ರದೇಶಕ್ಕೆ ತೆರಳಿ ಚಂದ್ರಶೇಖರ್​ನನ್ನು ವಶಕ್ಕೆ ಪಡೆದು ಕರೆತಂದು ವಿಚಾರಣೆ ನಡೆಸಿದಾಗ ಪ್ರಕರಣದ ವಾಸ್ತವಾಂಶ ಬಿಚ್ಚಿಟ್ಟಿದ್ದಾನೆ. ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಾಲ್​ ಚೌಕ್ಸೆ, ಡಿವೈಎಸ್​ಪಿ ಶಿವಕುಮಾರ್​, ತಹಸೀಲ್ದಾರ್​ ಸಿಗ್ಬತ್​ ಉಲ್ಲಾ, ಗುಡಿಬಂಡೆ ಆರಕ್ಷಕ ಉಪ ನಿರೀಕ್ಷಕ ಗಣೇಶ್​ ಸೇರಿದಂತೆ ವಿಧಿವಿಜ್ಞಾನ ತಂತ್ರರು, ಜಿಲ್ಲಾ ಸರ್ಜನ್​ ಸೇರಿದಂತೆ ವೈದ್ಯಕಿಯ ತಂಡ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಗುರುವಾರ ಬಂದಾರ್ಲಹಳ್ಳಿ ಕೆರೆಯಲ್ಲಿ ಮೃತದೇಹ ಹೂತಿರುವ ಸ್ಥಳ ಮಹಜರು ನಡೆಸಿ ಶವ ಹೊರತೆಗೆದು ಮರಣೋತ್ತರ ಪರೀೆ ನಡೆಸಲಾಯಿತು.

ಟನೆಯ ವಿವರ

ಗುಡಿಬಂಡೆ ತಾಲೂಕಿನ ಮೇಡಿಮಾಕಲಹಳ್ಳಿ ಕ್ರಾಸ್​ ಬಳಿಯ ಕೋಳಿಾಮ್​ರ್ ಬಳಿ ಭಾನುವಾರ ಮತ್ತು ಸೋಮವಾರ ವಿದ್ಯುತ್​ ಕಾಮಗಾರಿ ಮಾಡಲು ಬೀಚಗಾನಹಳ್ಳಿ ಲೈನ್​ಮನ್​ ಚಂದ್ರಕುಮಾರ್​ ಎಂಬಾತ ರವಿ ಎಂಬುವನನನ್ನು ಕರೆದುಕೊಂಡು ಹೋಗಿದ್ದ. ಈ ಸಮಯದಲ್ಲಿ ರವಿಗೆ ವಿದ್ಯುತ್​ ತಗುಲಿ ಕಂಬದಿಂದ ಬಿದ್ದು ಮೃತಪಟ್ಟಿದ್ದ ಎನ್ನಲಾಗಿದೆ. ಬಳಿಕ ಮೃತ ದೇಹವನ್ನು ಬಂದಾರ್ಲಹಳ್ಳಿ ಕೆರೆಯಲ್ಲಿ ಹೂತುಹಾಕಿ ಪರಾರಿಯಾಗಿದ್ದ.

ಸಮಗ್ರ ತನಿಖೆಗೆ ಒತ್ತಾಯ

ರವಿಯ ಮೃತದೇಹ ಹೊರತೆಗೆಯುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಟನೆ ಕುರಿತು ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು, ಒಬ್ಬನಿಂದ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಈ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿೆ ಕೊಡಿಸಿ, ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net