

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪಾಲಾರ್ ಬಳಿ ಕಾಡೆಮ್ಮೆಯೊಂದು ಗಾಯಗೊಂಡು ರಸ್ತೆಯಲ್ಲಿ ಕುಂಟುತ್ತಾ ಸಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾವೇರಿ ವನ್ಯಜೀವಿ ವಿಭಾಗ ವ್ಯಾಪ್ತಿಯ ಪಾಲಾರ್ ಚೆಕ್‌ಪೋಸ್ಟ್ ಬಳಿ ಸೆ.6ರಂದು ಸಂಜೆ 7.40ರಲ್ಲಿ ಗಾಯಗೊಂಡಿದ್ದ ಬೃಹತ್ ಕಾಡಮ್ಮೆ ನಿಧಾನಗತಿಯಲ್ಲಿ ರಸ್ತೆ ದಾಟುತ್ತಿತ್ತು. ಈ ವೇಳೆ ಸಂಚರಿಸುತ್ತಿದ್ದ ವಾಹನ ಸವಾರರು ಕಾಡೆಮ್ಮೆ ದಾಟುವ ತನಕ ವಾಹನ ನಿಲ್ಲಿಸಿದ್ದು, ರಸ್ತೆ ದಾಟುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಗಾಯಗೊಂಡಿರುವ ಕಾಡೆಮ್ಮೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಕೊಡುವಂತೆ ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.