ಅರ್ಚಕನ ನಿಧನಾನಂತರ ದೀಪಗಳು ಶಾಂತ

5mnd2.a
Published on

ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿನ ದೀಪನಾಥೇಶ್ವರ ದೇವಸ್ಥಾನದಲ್ಲಿನ ಮೂರು ದೀಪಗಳು ಶಾಂತವಾಗಿದ್ದು, ಈ ದೇವಸ್ಥಾನದಲ್ಲಿ ಬೇರೆ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು ಎಂದು ದೇವಸ್ಥಾನ ಆಡಳಿತ ಸಮಿತಿಯ ಸದಸ್ಯ ಶೇಷಾದ್ರಿ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ 45 ವರ್ಷಗಳಿಂದ ಮೂರು ದೀಪಗಳು ನಿರಂತರವಾಗಿ ಉರಿಯುತ್ತಿದ್ದವು. ಆದರೆ, ಈ ದೇವಸ್ಥಾನ ಪೂಜೆ ಮಾಡುತ್ತಿದ್ದ ಅರ್ಚಕ ವೆಂಕಟೇಶ ದೈವಜ್ಞ ಎಂಬುವರು ಜ. 23ರಂದು ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರ, ವೈಕುಂಠ ಸಮಾರಾಧನೆ ಮುಗಿಸಿ ನಂತರ ದೇವಸ್ಥಾನದ ಬಾಗಿಲು ತೆರೆದು ನೋಡಿದಾಗ ಮೂರು ದೀಪಗಳು ಶಾಂತವಾಗಿರುವುದು ಕಂಡು ಬಂದಿದೆ. ಇದರಿಂದ ಮುಂದೆ ಏನು ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ದೇವಸ್ಥಾನದಲ್ಲಿ ಹೋಮ, ಹವನ ಮಾಡಿಸಿ ಪೂಜೆ ಮಾಡಲಾಗುವುದು.

ಈ ಸ್ಥಳವು ದೇವರ ಅನುಗ್ರಹವಿರುವ ಸಿದ್ದಿ ಸ್ಥಳವಾಗಿದ್ದು, ಮುಂದಿನ ದಿನಗಳಲ್ಲಿ ಈ ದೇವಸ್ಥಾನದಲ್ಲಿ ಈಶ್ವರ, ಬಸವಣ್ಣ, ಮಹಾಗಣಪತಿ, ಜ್ಞಾನೇಶ್ವರಿ, ಐದು ತಲೆ ನಾಗದೇವರು ಹಾಗೂ ದತ್ತಾತ್ರೇಯ, ಚೌಡೇಶ್ವರಿ, ಭೂಚಿತರಾಯ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಅಡಳಿತ ಮಂಡಳಿಯವರು ನಿರ್ಧರಿಸಿದ್ದಾರೆ. ಮೂರ್ತಿಗಳ ಕೆತ್ತನೆಗೆ ಈಗಾಗಲೇ ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಸಿದ್ದಿ ಸ್ಥಳದಲ್ಲಿ ವಿವಿಧ ದೇವರುಗಳಿರುವ ದೇವಸ್ಥಾನ ನಿರ್ವಿುಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net