ಸದಸ್ಯರ ಸಹಕಾರವೇ ಸಂಘಕ್ಕೆ ಜೀವಾಳ

The lifeblood of the association is the cooperation of the members
ವಿಜಯಪುರದ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಹಡಪದ ಅಪ್ಪಣ ವಿವಿಧೋದ್ದೇಶಗಳ ಸಹಕಾರಿ ಸಂಘದ 12ನೇ ವಾರ್ಷಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ನಿಂಗಪ್ಪ ನಾವಿ, ರೂಪಾ ಹಡದ, ಚಿದಾನಂದ ತೊರವಿ ಮತ್ತಿತರರಿದ್ದಾರೆ.
Published on

ವಿಜಯಪುರ : ಸಹಕಾರಿ ಸಂಘಗಳಿಗೆ ಸದಸ್ಯರೇ ಜೀವಾಳ. ಅವರ ವ್ಯವಹಾರಗಳಿಂದಲೇ ಸಹಕಾರಿ ಸಂಘಗಳ ಏಳಿಗೆ ಸಾಧ್ಯ ಎಂದು ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ನಿಂಗಪ್ಪ ನಾವಿ ಹೇಳಿದರು.

ನಗರದ ಗಚ್ಚಿನಕಟ್ಟಿ ಕಾಲನಿಯ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಶ್ರೀ ಹಡಪದ ಅಪ್ಪಣ ವಿವಿಧೋದ್ದೇಶಗಳ ಸಹಕಾರಿ ಸಂಘದ 12ನೇ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಠೇವಣಿ ಹಾಗೂ ಸಾಲ ಪಡೆಯವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬ್ಯಾಂಕುಗಳಿಗೆ ಠೇವಣಿ ಎಷ್ಟು ಮಹತ್ವವೋ ಸಾಲ ನೀಡುವುದು ಅಷ್ಟೇ ಮುಖ್ಯವಾದುದು. ನಮ್ಮ ಬ್ಯಾಂಕ್‌ನಲ್ಲಿ ಎಫ್‌ಡಿ ಠೇವಣಿ ಮಾಡಿದ್ದಲ್ಲಿ ಕೇವಲ ಆರು ವರ್ಷ ಆರು ತಿಂಗಳುಗಳಲ್ಲಿಯೇ ದ್ವಿಗುಣವಾಗಲಿದೆ ಎಂದು ತಿಳಿಸಿದರು.

ನಿರ್ದೇಶಕ ಸಂಜೀವ ಹಡಪದ ವಾರ್ಷಿಕ ವರದಿ ಮಂಡಿಸಿ, ನಮ್ಮ ಸಂಘವು ಪ್ರಸ್ತುತ ಏಳು ನೂರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು ಅವರ ಶ್ರೇಯೋಭಿವೃದ್ದಿಗೆ ಸಾಲ ನೀಡಲಾಗುವುದು. ಅಲ್ಲದೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ, ಮನೆ ಕಟ್ಟಡ ನಿಮಾರ್ಣಕ್ಕೆ ಸಾಲ ನೀಡಲು ಯೋಜನೆ ಮಾಡಲಾಗಿದೆ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಸಂಘದ ಉಪಾಧ್ಯಕ್ಷ ಚಿದಾನಂದ ತೊರವಿ, ನಿರ್ದೇಶಕರಾದ ವಿರುಪಾಕ್ಷಿ ಕತ್ನಳ್ಳಿ, ಶಿವಾನಂದ ನಾವಿ, ನರಸಪ್ಪ ನಾವಿ, ಪರಮಾನಂದ ಹಡಪದ, ಅಶೋಕ ಕಟ್ಟಿ, ಕಲಾವತಿ ನಾವಿ, ರೂಪಾ ಹಡಪದ, ಶಾಂತಾನಂದ ದೇವೂರ, ವಿ.ಡಿ. ನಾವಿ, ಸಂಘದ ಸಿಇಒ ಓಂಕಾರ ನಾವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net