ಶಿಕ್ಷಣದಿಂದಲೇ ಬೆಳಗುವುದು ಶೋಷಿತರ ಬಾಳು

The life of the oppressed shines through education itself
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್​ನಿಂದ ಹಮ್ಮಿಕೊಂಡಿದ್ದ "ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮ ಜಯಂತಿ' ಸಮಾರಂಭವನ್ನು ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಶ್ರೀನಾಥ್​ ಪೂಜಾರಿ, ಬಾಲಾಜಿ ಕಾಂಬಳೆ ಮತ್ತಿತರರಿದ್ದಾರೆ.
Published on

ವಿಜಯಪುರ: ಶಿಕ್ಷಣದಿಂದಲೇ ಶೋಷಿತರ ಬಾಳು ಬೆಳಗಾಗುವುದು ಎಂಬುದನ್ನು ಮನಗಂಡ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ತಮ್ಮ ಇಡೀ ಜೀವನವೇ ಶೋಷಿತರ ಬಾಳನ್ನು ಬೆಳಕಾಗಿಸಲು ಶ್ರಮಿಸಿದರು ಎಂದು ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್​ನಿಂದ "ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮ ಜಯಂತಿ' ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ "ರಾಜ್ಯ ಮಟ್ಟದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ'ದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ಸಾವಿತ್ರಿಬಾಯಿ ಫುಲೆ ತೋರಿಸಿಕೊಟ್ಟಿದ್ದಾರೆ. ಅವರು ಬೋಧಿಸಿದ ಒಂದೊಂದು ಅಕ್ಷರವೂ ಇವತ್ತು ಶೋಷಿತರ ಬಾಳನ್ನು ಬೆಳಕಾಗಿಸುತ್ತಿವೆ. ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂದು ಹೇಳುತ್ತಾರೆ.

ಆದರೆ ಸಾವಿತ್ರಿಬಾಯಿ ಫುಲೆ ಅವರಿಗೆ ಅಕ್ಷರ ಜ್ಞಾನ ನೀಡಿ, ಅವರನ್ನು ಭಾರತ ಪ್ರಥಮ ಶಿಕ್ಷಕಿಯನ್ನಾಗಿಸಿದ ಮಹಾತ್ಮ ಜ್ಯೋತಿಬಾ ಫುಲೆ ಅವರ ಕೊಡುಗೆಯೂ ಸಾವಿತ್ರಿಬಾಯಿ ಫುಲೆ ಅವರ ಹೋರಾಟದ ಜೀವನದೊಳಗೆ ಅಪಾರವಾದದ್ದು ಎಂದರು.

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಜ್ಯೋತಿಬಾ ಫುಲೆ ಮೇಲ್ಜಾತಿಯ ಸ್ನೇಹಿತನ ಮದುವೆಗೆ ಹೋದಾಗ ಮದುವೆಗೆ ಬಂದಿದ್ದ ಮೇಲ್ಜಾತಿಯ ಜನರಿಂದ ಅಪಮಾನಕ್ಕೆ ಒಳಗಾಗುತ್ತಾರೆ. ರಾತ್ರಿಯಿಡೀ ಈ ಬಗ್ಗೆ ವಿಚಾರ ಮಾಡಿ, ಶೋಷಿತ ಸಮುದಾಯದವರು ಸ್ವಾಭಿಮಾನದಿಂದ ಬದುಕು ಬೇಕೆಂದರೆ ಅವರಿಗೆ ಶಿಕ್ಷಣವೆಂಬ ಅಸ ನೀಡಬೇಕು ಎಂದು ತೀರ್ಮಾನಿಸುತ್ತಾರೆ.

ಆಗಲೇ ಈ ಜಾತಿ ಪದ್ಧತಿ, ಅನ್ಯಾಯ ಮತ್ತು ಗುಲಾಮಗಿರಿ ಹೋಗುತ್ತದೆ ಎಂದು ಮನಗಂಡು ಮುಂದೆ ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರಿಗೆ ಅಕ್ಷರ ಜ್ಞಾನ ನೀಡುತ್ತಾರೆ. ಮುಂದೆ ಸಾವಿತ್ರಿಬಾಯಿ ಫುಲೆ ಟೀಚರ್​ ತರಬೇತಿ ಪಡೆದು, ಭಾರತ ಪ್ರಥಮ ಶಿಕ್ಷಕಿಯಾಗುತ್ತಾರೆ ಎಂದು ವಿವರಿಸಿದರು.

ದಲಿತ ವಿದ್ಯಾರ್ಥಿ ಪರಿಷತ್​ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಫಾದರ್​ ಟಿಯೋಲ ಮೆಚಡೊ ಸಾನ್ನಿಧ್ಯ ವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಟಿ.ಎಸ್​. ಕೋಲಾರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯೆ ದಾಾಯಿಣಿ ಹುಡೇದ ಮಾತನಾಡಿದರು.

ರೈತ ನಾಯಕ ಸಂಗಮೇಶ ಸಗರ, ಶಿಕ್ಷಕ ಶಮ್ಮಶರಲಿ ಮುಲ್ಲಾ, ಡಿವಿಪಿ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ರಾಜ್ಯ ಸಂಪರ್ಕ ಕಾರ್ಯದರ್ಶಿ ಅಜೀತ್​ ಮಾದರ, ಜಿಲ್ಲಾ ಸಂಚಾಲಕ ಅಕ್ಷಯ್​ ಕುಮಾರ್​ ಅಜಮನಿ, ಸಂದೀಪ ಕಾಂಟೆ, ಮೌನೇಶ ಜಾಲವಾಡಗಿ, ನಂದಕುಮಾರ್​ ಕರಡೆ, ಬಸವರಾಜ ಗಂಗೂರು, ಜಗದೇವ ಕುಂಬಾರ, ಲಕ್ಷ$್ಮಣ ಭಂಡಾರಿ, ಹಣಮಂತ ದಾಸರ್​, ದುರ್ಗಾ ಎಚ್​., ಹಣುಮೇಶ, ಆದರ್ಶ ಗಸ್ತಿ, ಮುಖಂಡರಾದ ಮಹಾದೇವ ಚಲವಾದಿ, ಮುತ್ತು ಚಲವಾದಿ, ಶಿಲ್ಪಾ ವಾಲ್ಮೀಕಿ, ಗುರುಪ್ರಸಾದ್​, ಕಾಶೀನಾಥ ಬೇಕಿನಾಳ ಮತ್ತಿತರರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net