ಹಿರಿಯರ ಬದುಕು ಕಿರಿಯರಿಗೆ ಮಾರ್ಗದರ್ಶನ

26 skp 2
ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ೨೫ ವಸಂತ ಪೂರೈಸಿದ ೨೫ ದಂಪತಿ ಗೌರವಿಸಲಾಯಿತು. ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ಮಹಾಂತದೇಶಿಕೇAದ್ರ ಮಹಾಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ ಇತರರಿದ್ದರು.
Published on

ಶಿಕಾರಿಪುರ: ಹಿರಿಯರು ಮನೆಯ ಚೈತನ್ಯ, ಬೆಳಕು. ಹಿರಿಯರಿಲ್ಲದ ಮನೆ ದೇವರಿಲ್ಲದ ಗುಡಿಯಂತೆ. ಯಾವ ಕಾರಣಕ್ಕೂ ಮನೆಯ ಹಿರಿಯರನ್ನು ಉಪೇಕ್ಷೆ ಮಾಡದೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿ ಎಂದು ತೊಗರ್ಸಿ ಮಳೆ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಶಿಕಾರಿಪುರ ವಿರಕ್ತಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೨೮೮ನೇ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ನೋವು-ನಲಿವು, ಕಷ್ಟಕಾರ್ಪಣ್ಯಗಳ ನಡುವೆ ಬದುಕು ಸಾಗಿಸುತ್ತಿರುವ ಹಿರಿಯರನ್ನು ಸನ್ಮಾನಿಸುವ ಭಾಗ್ಯ ನನಗೆ ದೊರೆತಿದೆ. ಅವರ ಅನುಭವವೇ ನಮಗೆ ಮಾರ್ಗದರ್ಶನ. ನಮಗೆ ಜನ್ಮ ನೀಡಿ ಸಲಹಿದ ಪಾಲಕರ ಕೊನೆಯ ದಿನಗಳು ವೃದ್ಧಾಶ್ರಮಗಳಲ್ಲಿ ಕೊನೆಯಾಗಬಾರದು ಎಂದು ತಿಳಿಸಿದರು.
ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಹಿರಿಯರ ಬದುಕಿನ ಆದರ್ಶ, ಧರ್ಮ, ಸಂಸ್ಕೃತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದರು. ತಿಪ್ಪಾಯಿಕೊಪ್ಪದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿದರು. ಅರುಣೋದಯ ತರುಣ ಸಂಘದ ಅಧ್ಯಕ್ಷ ಅರುಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜಿ.ಎಂ.ನಾಗರಾಜ್ ಶರಣರ ಜೀವನ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net