

ಗುತ್ತಲ: ಶಿಷ್ಯನ ಮನದ ಮಲಿನ ತೊಳೆಯಲು ಗುರುವಿನ ಸಾನ್ನಿಧ್ಯದಿಂದ ಮಾತ್ರ ಸಾಧ್ಯ. ಶಿಷ್ಯನಲ್ಲಿಯ ಅಂಧಕಾರ ಕಳೆದು ಆತನಲ್ಲಿ ಸುಜ್ಞಾನದ ಬೆಳಕನ್ನು ಮೂಡಿಸಿ ಜೀವನ ಪಾವನವಾಗಿಸುವ ಅಂತಃಕರಣ ಶ್ರೀಗುರುವಿನಲ್ಲಿರುತ್ತದೆ ಎಂದು ಹೂವಿನಹಡಗಲಿ ಗವಿಮಠದ ಹಿರಿಯ ಶಾಂತವೀರ ಸ್ವಾಮೀಜಿ ಹೇಳಿದರು.
ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಬುಧವಾರ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಸಂಸಾರ, ಸಂಪತ್ತಿನ ಬೆಳವಣಿಗೆಗೆ ಸೀಮಿತಗೊಳ್ಳದೇ ಧರ್ಮ, ಸಂಸ್ಕಾರ ಪಸರಿಸುವ ಧಾಮಗಳಾದ ಮಠ- ಮಂದಿರಗಳಲ್ಲಿ ಜರುಗುವ ಧರ್ಮ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು. ಪ್ರವಚನಕಾರ ಶಶಿಧರ ಶಾಸ್ತ್ರಿ ಮಾತನಾಡಿ, ಮಹಾಶಿವಶರಣೆ ಗುಡ್ಡಾಪುರ ದಾನಮ್ಮದೇವಿ ಜೀವನ ಚರಿತ್ರೆ ನಮ್ಮ ಜೀವನದಲ್ಲಿ ಪ್ರಭಾವ ಬೀರುವಂಥದ್ದು. ಅಂತಹ ತಾಯಿಯ ಜೀವನ ಚರಿತ್ರೆ ಕೇಳುವ ಭಾಗ್ಯ ನಿಮ್ಮದಾಗಿದೆ ಎಂದರು.
ಇದೇ ವೇಳೆ ನೆಗಳೂರ ಗ್ರಾಪಂ ಸದಸ್ಯರನ್ನು ಶ್ರೀಮಠದಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಗವಾಯಿಗಳು, ಶರಣುಕುಮಾರ ಗೋಗಿ, ತಾಪಂ ಉಪಾಧ್ಯಕ್ಷೆ ಸುವರ್ಣ ಸುಕುಳಿ, ಗ್ರಾಪಂ ಅಧ್ಯಕ್ಷ ಸುರೇಶ ಸಪ್ಪಣ್ಣನವರ, ಉಪಾಧ್ಯಕ್ಷೆ ಶಾಂತಾ ಶಟ್ಟೆಪ್ಪನವರ, ಸದಸ್ಯರಾದ ಹನುಮಂತಪ್ಪ ದೊಡ್ಡಿರಪ್ಪನವರ, ಭರಮಣ್ಣ ದೊಡ್ಡಿರಪ್ಪನವರ, ರುದ್ರಗೌಡ ರೊಡ್ಡಗೌಡ್ರ, ಬಸನಗೌಡ ಸುಕುಳಿ, ಭಾಗ್ಯಶ್ರೀ ಅಂಗಡಿ, ಶಾಂತಮ್ಮ ಬಾಲಣ್ಣನವರ, ಡಿ.ಎಚ್. ತಿಮ್ಮಣ್ಣನವರ, ಸಿಕಂದರ್ ಮುಲ್ಲಾ, ವಿಜಯಲಕ್ಷ್ಮೀ ಹುಂಬಿ, ನಾಗಮ್ಮ ದೊಡ್ಡಿರಪ್ಪನವರ, ಶಿವಾನಂದ ಸಪ್ಪಿನ್, ಶಕುಂತಲಾ ಕೆರೂರ, ಸುಮಲತಾ ತಂಬೂರಿ, ಹೇಮಲತಾ ಸಂಜೀವಣ್ಣನವರ, ಜಾತ್ರಾ ಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ದೊಡ್ಡಬಸನಗೌಡ ಸುಕುಳಿ, ಉಪಾಧ್ಯಕ್ಷ ಕೆ.ಎಂ. ಮೈದೂರ ಇದ್ದರು.
ವೀರಣ್ಣ ವಿಭೂತಿ ಕುಟುಂಬಸ್ಥರು ಪ್ರಸಾದ ಸೇವೆ ನೆರವೇರಿಸಿದರು ಶ್ರೀಮಠದ ಧರ್ಮಶಾಲಾ ವಿದ್ಯಾರ್ಥಿಗಳು ವೇದ ಘೊಷ ಮಾಡಿದರು. ಗುರುಶಾಂತಸ್ವಾಮಿ ಹಿರೇಮಠ ನಿರ್ವಹಿಸಿದರು.