ಮೋದಿ ನಾಯಕತ್ವದಲ್ಲಿ ಉಗ್ರರ ಮಟ್ಟ

08 05 2025_BGR_RURAL_FLAP_10A
ದೇವನಹಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಬಿಜೆಪಿ ಮುಖಂಡರು ಸ್ವಾಗತಿಸಿದರು. ಮಾಜಿ ಶಾಸಕ ಜಿ. ಚಂದ್ರಣ್ಣ, ಬಯಾಪ ಮಾಜಿ ಅಧ್ಯಕ್ಷ ಸಿ. ಅಶ್ವತ್ಥನಾರಾಯಣ್​, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್​, ತಾಲೂಕು ಬಿಜೆಪಿ ಅಧ್ಯಕ್ಷ ಅಂಬರೀಶ್​ ಗೌಡ ಇದ್ದರು.
Published on

ದೇವನಹಳ್ಳಿ: ದೇಶದ ಸೋದರಿಯರ ಸಿಂಧೂರ ಅಳಿಸಿದ ಉಗ್ರರ ಮಟ್ಟ ಹಾಕುವ ಕೆಲಸ ಮೋದಿ ನಾಯಕತ್ವದಲ್ಲಿ ನಡೆಯುತ್ತಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.

ಕೋಲಾರದಲ್ಲಿ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಲು ದೇವನಹಳ್ಳಿ ಮಾರ್ಗದಲ್ಲಿ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಪಟ್ಟಣದಲ್ಲಿ ಬಿಜೆಪಿ ಮುಖಂಡರು ಸ್ವಾಗತಿಸಿದ ಸಂದರ್ಭದಲ್ಲಿ ಮಾತನಾಡಿದರು. ಇದು ಶಾಂತಿ ಮಂತ್ರ ಜಪಿಸುವ ಕಾಲವಲ್ಲ, ಈ ಬಗ್ಗೆ ರಾಜ್ಯದ ಕಾಂಗ್ರೆಸ್​ನವರು ಬಾಯಿಗೆ ಬಂದ ಹಾಗೆ ಹೇಳಿಕೆ ಕೊಡುವುದು ಸರಿಯಲ್ಲ ಎಂದ ಅವರು, ಭಾರತ ಸೇನಾ ಬಲದ ಮುಂದೆ ಯಾರ ಅಟ್ಟಹಾಸವೂ ನಡೆಯುವುದಿಲ್ಲ ಎಂದರು.

ರೆಡ್ಡಿಗೆ ಜಯ ಸಿಗಲಿದೆ: ಜನಾರ್ದನರೆಡ್ಡಿ ಅವರಿಗೆ ಕೆಳ ನ್ಯಾಯಾಲಯದಲ್ಲಿ ಶಿೆಯಾಗಿದ್ದರೂ ಮೇಲಿನ ನ್ಯಾಯಾಲಯದಲ್ಲಿ ಅವರಿಗೆ ನ್ಯಾಯ ಸಿಗಲಿದೆ ಎಂಬ ಭರವಸೆ ಇದೆ. ಈ ಬಗ್ಗೆ ಮಾತನಾಡಲು ಕಾಂಗ್ರೆಸ್​ನವರಿಗೆ ನೈತಿಕ ಹಕ್ಕಿಲ್ಲ, ಎಸ್ಸಿ$್ಟ ನಿಗಮದ ಹಣ ಲೂಟಿ ಮಾಡಿದ ನಾಗೇಂದ್ರ, ಸತೀಶ್​ ಶೈಲ್​ ರಾಜಾರೋಷವಾಗಿ ಹೊರಗಿದ್ದಾರೆ, ತಪ್ಪು ಮಾಡದ ಜನಾರ್ದನ ರೆಡ್ಡಿ ನಿದೋರ್ಷಿಯಾಗಿ ಹೊರಬರುವರೆಂಬ ಭರವಸೆ ನಮಗಿದೆ ಎಂದು ಶ್ರೀರಾಮುಲು ಹೇಳಿದರು. ಇದು ರಾಜಕೀಯ ಮಾಡುವ ಸಮಯಲ್ಲ, ಕೇಂದ್ರದ ನಿರ್ಧಾರಗಳ ಬಗ್ಗೆ ಎಲ್ಲ ರಾಜ್ಯಗಳು ಕೈಜೋಡಿಸಿ ಸಹಕರಿಸಲೇಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಅಂಬರೀಶ್​ ಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net