ಕುಳಲಿ ಪಿಕೆಪಿಎಸ್ ಸಮಬಲದ ಲಿತಾಂಶ

The letter of the PKPS balance sheet
The letter of the PKPS balance sheet
Published on

ಮುಧೋಳ : ಭಾರಿ ಕೂತುಹಲ ಮೂಡಿಸಿದ್ದ ತಾಲೂಕಿನ ಕುಳಲಿ ಗ್ರಾಮದ ಪಿಕೆಪಿಎಸ್ ನಿರ್ದೇಶಕರ ಆಯ್ಕೆ ಚುನಾವಣೆ ಕುತೂಹಲ ಘಟಕ್ಕೆ ತಲುಪಿದ್ದು, ಅಧಿಕಾರಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹಗ್ಗಜಗ್ಗಾಟ ನಡೆಯುವುದು ಖಚಿತವಾಗಿದೆ.

ಒಟ್ಟು 12 ನಿರ್ದೇಶಕ ಸ್ಥಾನಗಳ ಪೈಕಿ 6 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಾಗೂ 6 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಅಪ್ಪಾಸಾಹೇಬ ಕೋಮಾರ, ಸುಭಾಷ ಬಡಿಗುಡದಾರ, ರಮೇಶ ಡೋಣಿ, ಭೀಮಪ್ಪತಲ್ಲೂರ, ರಾಮಚಂದ್ರ ಪೂಜಾರಿ, ಸಾಲಗಾರರ ಹಿಂದುಳಿದ ಬ ವರ್ಗದಿಂದ ಮಲ್ಲಪ್ಪ ಮಕನಿ, ಸಾಲಗಾರರ ಮಹಿಳಾ ಕ್ಷೇತ್ರದಿಂದ ವಿಜಯಲಕ್ಷ್ಮೀ ಬೆಳಗಲಿ, ಕಲಾವತಿ ಐಹೊಳಿ, ಸಾಲಗಾರರ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಮುತ್ತಪ್ಪ ಪೋಳ, ಸಾಲಗಾರರ ಹಿಂದುಳಿದ ಆ ವರ್ಗದ ಕ್ಷೇತ್ರದಿಂದ ರಾಮಣ್ಣ ಬನಾಜಗೋಳ, ಸಾಲಗಾರರ ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ವೆಂಕಪ್ಪ ತಳವಾರ, ಬಿನ್ ಸಾಲಗಾರರ ಕ್ಷೇತ್ರದಿಂದ ಶಂಭು ಚಿಮ್ಮಡ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಚಿನ ಚಿನಗುಂಡಿ ತಿಳಿಸಿದ್ದಾರೆ.

ಪದನಿಮಿತ್ತ ಸದಸ್ಯರ ಮತದತ್ತ ಎಲ್ಲರ ಚಿತ್ತ: ಚುನಾವಣೆಯಲ್ಲಿ ಎರಡೂ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಸಮಾನ ರೀತಿಯಲ್ಲಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ಡಿಸಿಸಿ ಬ್ಯಾಂಕ್ ಪದನಿಮಿತ್ತ ಸದಸ್ಯರ ಮತ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಅಧಿಕಾರ ಹಿಡಿಯುವ ಇರಾದೆ ಹೊಂದಿರುವ ಎರಡು ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳ ಚಿತ್ತ ಪದನಿಮಿತ್ತ ಸದಸ್ಯರ ಮತದತ್ತ ನೆಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net