ಕುಳಲಿ ಪಿಕೆಪಿಎಸ್ ಸಮಬಲದ ಫಲಿತಾಂಶ

The letter of the PKPS balance sheet
ಮುಧೋಳ ತಾಲೂಕಿನ ಕುಳಲಿ ಪಿಕೆಪಿಎಸ್ ಚುನಾವಣೆಯಲ್ಲಿ ಜಯ ಸಾಧಿಸಿದ ಅಪ್ಪಾಸಾಹೇಬ ಕೋಮಾರ, ಸುಭಾಷ ಬಡಿಗುಡದಾರ, ರಮೇಶ ಡೋಣಿ, ಭೀಮಪ್ಪ ತಲ್ಲೂರ, ರಾಮಚಂದ್ರ ಪೂಜಾರಿ ಸಂಭ್ರಮಾಚರಿಸಿದರು.
Published on

ಮುಧೋಳ: ಭಾರಿ ಕೂತುಹಲ ಮೂಡಿಸಿದ್ದ ತಾಲೂಕಿನ ಕುಳಲಿ ಗ್ರಾಮದ ಪಿಕೆಪಿಎಸ್ ನಿರ್ದೇಶಕರ ಆಯ್ಕೆ ಚುನಾವಣೆ ಕುತೂಹಲ ಘಟಕ್ಕೆ ತಲುಪಿದ್ದು, ಅಧಿಕಾರಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹಗ್ಗಜಗ್ಗಾಟ ನಡೆಯುವುದು ಖಚಿತವಾಗಿದೆ.

ಒಟ್ಟು 12 ನಿರ್ದೇಶಕ ಸ್ಥಾನಗಳ ಪೈಕಿ 6 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಾಗೂ 6 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಅಪ್ಪಾಸಾಹೇಬ ಕೋಮಾರ, ಸುಭಾಷ ಬಡಿಗುಡದಾರ, ರಮೇಶ ಡೋಣಿ, ಭೀಮಪ್ಪತಲ್ಲೂರ, ರಾಮಚಂದ್ರ ಪೂಜಾರಿ, ಸಾಲಗಾರರ ಹಿಂದುಳಿದ ಬ ವರ್ಗದಿಂದ ಮಲ್ಲಪ್ಪ ಮಕನಿ, ಸಾಲಗಾರರ ಮಹಿಳಾ ಕ್ಷೇತ್ರದಿಂದ ವಿಜಯಲಕ್ಷ್ಮೀ ಬೆಳಗಲಿ, ಕಲಾವತಿ ಐಹೊಳಿ, ಸಾಲಗಾರರ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಮುತ್ತಪ್ಪ ಪೋಳ, ಸಾಲಗಾರರ ಹಿಂದುಳಿದ ಆ ವರ್ಗದ ಕ್ಷೇತ್ರದಿಂದ ರಾಮಣ್ಣ ಬನಾಜಗೋಳ, ಸಾಲಗಾರರ ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ವೆಂಕಪ್ಪ ತಳವಾರ, ಬಿನ್ ಸಾಲಗಾರರ ಕ್ಷೇತ್ರದಿಂದ ಶಂಭು ಚಿಮ್ಮಡ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಚಿನ ಚಿನಗುಂಡಿ ತಿಳಿಸಿದ್ದಾರೆ.

ಪದನಿಮಿತ್ತ ಸದಸ್ಯರ ಮತದತ್ತ ಎಲ್ಲರ ಚಿತ್ತ

ಚುನಾವಣೆಯಲ್ಲಿ ಎರಡೂ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಸಮಾನ ರೀತಿಯಲ್ಲಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ಡಿಸಿಸಿ ಬ್ಯಾಂಕ್ ಪದನಿಮಿತ್ತ ಸದಸ್ಯರ ಮತ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಅಧಿಕಾರ ಹಿಡಿಯುವ ಇರಾದೆ ಹೊಂದಿರುವ ಎರಡು ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳ ಚಿತ್ತ ಪದನಿಮಿತ್ತ ಸದಸ್ಯರ ಮತದತ್ತ ನೆಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net