ಭಗವದ್ಗೀತೆಯಲ್ಲಿದೆ ಜೀವನ ಪಾಠ

Krishna Jnmashtami Celabaration
Published on

ಕಲಘಟಗಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ತಾಲೂಕು ಆಡಳಿತ ಹಾಗೂ ಯಾದವ ಸಮಾಜದ ವತಿಯಿಂದ ಶ್ರೀಕೃಷ್ಣ ಜಯಂತಿ ಆಚರಿಸಲಾಯಿತು.

ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಗ್ರೇಡ್-2 ತಹಸೀಲ್ದಾರ್ ಬಸವರಾಜ ಹೊಂಕಣ್ಣವರ, ನಮ್ಮ ಜೀವನ ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಶ್ರದ್ಧೆ, ಏಕಾಗ್ರತೆ ನಮ್ಮ ಎಲ್ಲ ಕಾರ್ಯಗಳ ಯಶಸ್ಸಿಗೆ ಪೂರಕ. ಇದನ್ನು ಶ್ರೀಕೃಷ್ಣನ ಜೀವನದಿಂದ ತಿಳಿದುಕೊಳ್ಳಬಹುದಾಗಿದೆ ಎಂದರು.

ಉಮೇಶ ಬಮ್ಮಿಗಟ್ಟಿ, ಎಸ್.ಆರ್. ಪುರಾಣಿಕ, ಗಂಭೀರ, ಕುಮಾರ ಮುದಕ್ಕನ್ನವರ, ಯಾದವ ಸಮಾಜದ ಮುಖಂಡರಾದ ಭೀಮನಗೌಡ ಕಡಕೋಳ, ಪ್ರಹ್ಲಾದಗೌಡ ಗೊಲ್ಲಗೌಡರ, ಈರಪ್ಪ ಗುರವಣ್ಣವರ, ನಾಮದೇವ ನೇಮಣ್ಣವರ, ಶಂಕ್ರಪ್ಪ ತಿಪ್ಪಣ್ಣವರ, ಸುರೇಶ ನೀಲಣ್ಣವರ, ಈರಯ್ಯ ಕಟ್ನೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net