

ಚನ್ನಗಿರಿ: ಕಳೆದ 15 ದಿನಗಳಿಂದ ತಾಲೂಕಿನ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಗರಗ ಗ್ರಾಮದಲ್ಲಿ ಬೋನಿಗೆ ಮಂಗಳವಾರ ರಾತ್ರಿ ಬಿದ್ದಿದೆ.
ತಾಲೂಕಿನ ವಿವಿಧ ಗ್ರಾಮಗಳಿಗೆ ಬರುತ್ತಿದ್ದ ಚಿರತೆ ನಾಯಿಗಳನ್ನು ಎಳೆದ್ಯೊಯ್ಯುತ್ತಿತ್ತು. ಇದರಿಂದ ಹೆದರಿದ ಜನರು ಹಗಲು ವೇಳೆಢ್ಝ್ಛ್ಝಜಿ ಹೊಲಗದ್ದೆಗೆ ತೆರಳುವುದನ್ನು ನಿಲ್ಲಿಸಿದ್ದರು.
ಚಿರತೆ ಹಿಡಿಯುವಂತೆ ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇಲಾಖೆಯವರು ಮಂಗಳವಾರ ಗರಗ ಗ್ರಾಮದಲ್ಲಿ ಬೋನು ಇರಿಸಿದ್ದರು. ಬೋನಿಗೆ ಬಿದ್ದ ಚಿರತೆಯನ್ನು ಇಲಾಖೆಯವರು ಶಿವಮೊಗ್ಗ ಜಿಲ್ಲೆ ಲಕ್ಕವಳ್ಳಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.