

ನ್ಯಾಮತಿ: ತಾಲೂಕಿನ ಗುಡ್ಡದಂಚಿನ ಗಡಿ ಗ್ರಾಮಗಳಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸುತ್ತಿರುವ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಬೋನು ಅಳವಡಿಸಿದರು.
ದೊಡ್ಡೇತ್ತಿನಹಳ್ಳಿ, ಕುಂಕುವ ರಸ್ತೆಯ ಚೌಡಮ್ಮ ದೇವಾಲಯದ ಬಳಿಯ ಹಳ್ಳದ ಸರದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯರು ಗಮನಿಸಿ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು, ಈ ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ವಿವಿಧೆಡೆ ಒಟ್ಟು ಮೂರು ಬೋನು ಅಳವಡಿಸಿ, ಅದರಲ್ಲಿಯೇ ಪ್ರತ್ಯೇಕವಾಗಿ ಶ್ವಾನ ಬಿಡಲಾಗಿದೆ ಎಂದು ಹೊನ್ನಾಳಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಚೇತನ್ ಕೆ.ಆರ್. ತಿಳಿಸಿದರು.
ಚಿರತೆ ಸೆರೆ ಆಗುವವರೆಗೂ ರೈತರು ಹೊಲ, ತೋಟಗಳಿಗೆ ಒಬ್ಬಂಟಿಯಾಗಿ ಓಡಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.