

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯವು ಶಿಕ್ಷಣ ತಜ್ಞರ ದಿನಾಚರಣೆ ನಿಮಿತ್ತ ಆ. 2ರಂದು ಬೆಳಗ್ಗೆ 11.30ಕ್ಕೆ ಕವಿವಿ ಸೆನೆಟ್ ಸಭಾಂಗಣದಲ್ಲಿ ಡಾ.ಡಿ.ಸಿ.ಪಾವಟೆ ಸ್ಮಾರಕ ಮೂಲತತ್ವ ಉಪನ್ಯಾಸ ಏರ್ಪಡಿಸಿದೆ.
ನವದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿಯ ವಿಶ್ರಾಂತ ನಿರ್ದೇಶಕ ಡಾ. ಎಂ.ಗೋವಿಂದ ರಾವ್ ಅವರು ಶತಮಾನೋತ್ಸವ ವರ್ಷದಲ್ಲಿ ವಿಕಸಿತ ಭಾರತದ ಸುಧಾರಣೆಯ ಅತ್ಯಗತ್ಯ ಕುರಿತು ಮಾತನಾಡಲಿದ್ದಾರೆ. ಕವಿವಿ ಕುಲಸಚಿವ ಡಾ.ಎ.ಚೆನ್ನಪ್ಪ, ಮೂಲತತ್ವ ಉಪನ್ಯಾಸ ಮಾಲಿಕೆಯ ಸಂಯೋಜಕ ಡಾ.ಮಲ್ಲಿಕಾರ್ಜುನ ಪಾಟೀಲ, ಪ್ರಸಾರಾಂಗ ನಿರ್ದೇಶಕ ಡಾ.ಅಶೋಕ ಹೂಲಿಬಂಡಿ ಭಾಗವಹಿಸಲಿದ್ದಾರೆ. ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.