ಸ್ವಚ್ಛ ಭಾರತದ ರೂವಾರಿಗಳು

23 mbl 1
Published on

ಪೌರಕಾರ್ಮಿಕರ ದಿನಾಚರಣೆಯಲ್ಲಿ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಬಣ್ಣನೆ

ಮುಳಬಾಗಿಲು: ಪೌರಕಾರ್ಮಿಕರು ಸ್ವಚ್ಛ ಭಾರತದ ರೂವಾರಿಗಳಾಗಿದ್ದು, ಸ್ವಚ್ಛತಾ ಸೇನಾನಿಗಳಿಗೆ ಪೌರಕಾರ್ಮಿಕರ ದಿನಾಚರಣೆ ಹಬ್ಬದ ದಿನ. ನಿತ್ಯ ನಗರವನ್ನು ಸ್ವಚ್ಛವಾಗಿಡುವ ಮೂಲಕ ಆರೋಗ್ಯಯುತ ಪರಿಸರ ಸೃಷ್ಟಿ ಮಾಡುವ ಸೇವೆ ಅಮೂಲ್ಯ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿದರು.

ನಗರಸಭೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 14ನೇ ರಾಜ್ಯ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರು ಒಂದು ದಿನ ಮುಷ್ಕರ ಮಾಡಿದರೆ ಇಡೀ ನಗರ ಗಬ್ಬು ನಾರುತ್ತದೆ. ಅನೈರ್ಮಲ್ಯ ಉಂಟಾಗಿ ವಾತಾವರಣ ಕಲುಷಿತಗೊಳ್ಳುತ್ತದೆ. ಸಮಾಜದ ಆರೋಗ್ಯದ ಜತೆಗೆ ವೈಯಕ್ತಿಕ ಆರೋಗ್ಯಕ್ಕೂ ಒತ್ತು ನೀಡಬೇಕು. ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿ, ಆರೋಗ್ಯದಿಂದ ಇರಬೇಕು ಎಂದು ಸಲಹೆ ನೀಡಿದರು.

ಪೌರಾಯುಕ್ತ ವಿ.ಶ್ರೀಧರ್​ ಮಾತನಾಡಿ, ಪ್ರತಿದಿನ ಮುಂಜಾನೆ ಪೌರಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಿ ಮಳೆ,ಚಳಿ,ಗಾಳಿ, ಬಿಸಿಲು ಎನ್ನದೆ ನಗರದ ಸ್ವಚ್ಛತೆ ಕಾರ್ಯ ಮಾಡುತ್ತಾರೆ. ಸಾರ್ವಜನಿಕರು ಅಂಗಡಿ ಮುಂಗಟ್ಟು, ವ್ಯಾಪಾರಿಗಳು ರಸ್ತೆಗಳಿಗೆ ಚರಂಡಿಗಳಿಗೆ ಎಸೆದ ತ್ಯಾಜ್ಯ ವಸ್ತುಗಳನ್ನು, ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಿ ಸಮಾಜದ ಆರೋಗ್ಯ ಕಾಪಾಡುತ್ತಾರೆ ಎಂದರು.

ಸದಸ್ಯರಾದ ಅಕ್ಮಲ್​ ಬೇಗ್​, ಮುನಿರಾಜು, ಜಭಿವುಲ್ಲ, ಷಾಹೀನ್​, ಚಂದ್​ ಪಾಷಾ, ವಾಹೀದ್​, ಇಮ್ರಾನ್​, ನೌಷಾದ್​, ರಿಯಾಜ್​ ಅಹ್ಮದ್​, ನಾಗರಾಜ್​, ಎಂ.ಜೆ.ಮಲ್ಲಿಕಾರ್ಜುನ್​, ಮುಖಂಡರಾದ ಪಿ.ರಾಮಚಂದ್ರಯ್ಯ, ಮಂಡಿಕಲ್​ ರಾಜಣ್ಣ, ಗುಣಿಗಂಟಿಪಾಳ್ಯ ನಾಗೇಶ್​, ನಗರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಅಮಾನುಲ್ಲ, ಶರಣಬಸಯ್ಯ, ಕಂದಾಯಾಧಿಕಾರಿ ನಾರಾಯಣ, ಪರಿಸರ ಅಭಿಯಂತರ ಮಹೇಶ್​, ಹಿರಿಯ ಆರೋಗ್ಯ ನಿರೀಕ್ಷಕಿ ವಿ.ಪ್ರತಿಭಾ, ಸಿಬ್ಬಂದಿ ಶೈಲಜಾ, ಅರ್ಚನಾ, ಆಶ್ರಯ ನಾಗರಾಜ್​, ಆಜಾಮ್​, ಶಿವಾರೆಡ್ಡಿ, ಅಮೃತಾ, ಆಂಜನೇಯರೆಡ್ಡಿ, ಐ.ಸುನೀಲ್​ ಕುಮಾರ್​, ಡಿಸಿಬಿ ಸುಬ್ರಮಣಿ, ನಾಗರಾಜ್​, ಜಮುನ, ನಾಗೇಶ್​, ಮಂಜುನಾಥ್​ ,ಅಮಿರ್​ ಜಾನ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net