

ಆಲಮೇಲ: ದೇಶದಲ್ಲಿದ್ದ ಅಸ್ಪಶ್ಯತೆ ತೊಲಗಿಸಲು ದಿಟ್ಟ ಹೋರಾಟ ನಡೆಸಿದ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಎಂದು ಸರ್ಕಾರಿ ಹೆಣ್ಣುಮಕ್ಕಳ ಶಾಲೆ ಸಹ ಶಿಕ್ಷಕ ರವಿ ಹೊಸಮನಿ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪಪಂ ಆಶ್ರಯದಲ್ಲಿ ಸೋಮವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 134 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಈ ಸಮಾಜದ ಕಡು ಬಡವರು, ಸಾಧಾರಣ ವರ್ಗದ ಜನರಿಗೆ ಹೊಸ ಭರವಸೆ ನೀಡಿ, ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಮಂತ್ರಗಳನ್ನು ಶೋಷಿತ ವರ್ಗಕ್ಕೆ ನೀಡಿದ ಯುಗ ಪುರುಷ. ಇವರ ಜ್ಞಾನ ಸಂಪತ್ತಿಗೆ ಜಗತ್ತೇ ಇಂದಿಗೂ ತಲೆ ಬಾಗುತ್ತದೆ ಎಂದರು.
ತಹಸೀಲ್ದಾರ್ ಕೆ. ವಿಜಯಕುಮಾರ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಸಾಮಾಜಿಕ ನ್ಯಾಯದ ಹರಿಕಾರರು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಹೇಳಿದರು.
ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಪ್.ಎಚ್. ಪಠಾಣ, ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಪಿಎಸ್‌ಐ ಅರವಿಂದ ಅಂಗಡಿ, ಪಪಂ ಅಧ್ಯಕ್ಷ ಸಾಧಿಕ ಸುಂಬಡ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅಶೋಕ ಕೋಳಾರಿ, ಮುಖಂಡರಾದ ಗುಂಡು ಮೇಲಿನಮನಿ, ಹರೀಶ ಯಂಟಮನ, ಶಿವುಕುಮಾರ ಮೇಲಿನಮನಿ, ಅಜೀತ್ ಕುಲಕರ್ಣಿ, ಯಲ್ಲಪ್ಪ ಬುರುಡ, ಕಂದಾಯ ನಿರೀಕ್ಷಕ ಎಂ. ಎ. ಅತ್ತಾರ, ಗ್ರಾಮ ಆಡಳಿತ ಅಧಿಕಾರಿ ವಿನೋದ ಬಿಸೇ, ಶಶಿಧರ ಗಣಿಹಾರ, ಶಶಿಧರ ನಾಯ್ಕೋಡಿ, ರಾಜು ಮೇತ್ರಿ ಇತರರಿದ್ದರು.