ಇತಿಹಾಸದಲ್ಲೇ ಅತಿದೊಡ್ಡ ಆರ್ಥಿಕ ಪ್ಯಾಕೇಜ್ - ಸುರೇಶ ಅಂಗಡಿ

Suresh_Web
Published on

ಬೆಳಗಾವಿ: ಇಡೀ ಭಾರತವೇ ಕರೊನಾ ವಿರುದ್ಧ ವಿಜಯ ಸಾಧಿಸಿದೆ. ದೇಶದಲ್ಲಿರುವ ವಿವಿಧ ಕ್ಷೇತ್ರಗಳು ಆರ್ಥಿಕವಾಗಿ ಕುಸಿದಿವೆ. ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೊಸ ಇತಿಹಾಸ ನಿರ್ಮಿಸಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವಂತೆ ರೈತರು, ಕುಶಲಕರ್ಮಿಗಳು ಸೇರಿದಂತೆ ಸ್ಥಳೀಯರಿಗೆ ಉದ್ಯೋಗ ಅವಕಾಶ ಸೃಷ್ಟಿಸಲು 20 ಲಕ್ಷ ಕೋಟಿ ರೂ. ನೀಡಿದ್ದಾರೆ. ಇದು ರೈತರು, ಸಣ್ಣ, ಗುಡಿಕೈಗಾರಿಕೆಗಳಿಗೆ, ಮಧ್ಯಮ ವರ್ಗದ ಜನತೆಗೆ ಆರ್ಥಿಕ ಶಕ್ತಿ ನೀಡಲಿದೆ ಎಂದು ಸಚಿವ ಅಂಗಡಿ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net