

ಮುಳಬಾಗಿಲು : ಮುಳಬಾಗಿಲು ತಾಲೂಕು ಕಾಂಗ್ರೆಸ್ ಮುಖಂಡ ವಿ.ಆದಿನಾರಾಯಣ ಅವರ ತೀರ್ವಾನವೇ ಎಲ್ಲ ಹಂತದಲ್ಲಿ ಅಂತಿಮ. 2028ರಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವ ಮೂಲಕ ವಿಧಾನಸಭೆಗೆ ಕಳುಹಿಸಿಕೊಡಬೇಕು ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಮನವಿ ಮಾಡಿದರು.
ತಾಲೂಕಿನ ತಾಯಲೂರು ಗ್ರಾಮದಲ್ಲಿ ಎಮ್ಮೆನತ್ತ, ಮೊತ್ತಕಪಲ್ಲಿ, ದೂಲ್ಲಪಲ್ಲಿ, ತಾಯಲೂರು ಗ್ರಾಪಂ ವ್ಯಾಪ್ತಿಗಳ ಗ್ರಾಮಗಳಿಂದ ಆಗಮಿಸಿದ ಮಹಿಳೆಯರಿಗೆ ಗೌರಿ- ಗಣೇಶ ಹಬ್ಬದ ಅಂಗವಾಗಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ದೀರ್ ಸುಮಂಗಲೀ ಭವ ಕಾರ್ಯಕ್ರಮದಲ್ಲಿ ವಾತನಾಡಿದರು.
ಹಣ ಯಾರಿಗೂ ಸುಮ್ಮನೆ ಬರುವುದಿಲ್ಲ. ಶ್ರಮಪಟ್ಟು ವ್ಯಾಪಾರ ವ್ಯವಹಾರ ವಾಡಿದರೆ ವಾತ್ರ ಸಾಧ್ಯ. ಆದಿನಾರಾಯಣ ಅವರು ಸ್ವಂತ ಹಣದಲ್ಲಿ ಸೂರತ್‌ನಿಂದ ಗುಣಮಟ್ಟದ ಸೀರೆ ಕುಪ್ಪಸಗಳನ್ನು ಖರೀದಿಸಿ ತಂದು ಹಬ್ಬಕ್ಕೆ ಅರಿಶಿಣ- ಕುಂಕುಮ, ತೆಂಗಿನಕಾಯಿ ಸೇರಿ ಫಲ ತಾಂಬೂಲಗಳ ಮೂಲಕ ಮಹಿಳೆಯರ ಮಡಿಲು ತುಂಬುವ ಕಾರ್ಯಕ್ರಮ ನಡೆಸಿರುವುದು, ಅವರ ಸೇವಾ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುವಾರ್ ವಾತನಾಡಿ, ಸಿದ್ದರಾಮಯ್ಯ, ಡಿ.ಕೆ.ಶಿವಕುವಾರ್ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ ಪ್ರತಿ ಕುಟುಂಬವನ್ನು ಆರ್ಥಿಕವಾಗಿ ಸಬಲಗೊಳಿಸುತ್ತಿದೆ. ಮುಳಬಾಗಿಲು ಕ್ಷೇತ್ರದಲ್ಲಿ 6ನೇ ಗ್ಯಾರಂಟಿಯಾಗಿ ಆದಿನಾರಾಯಣ ವಿವಿಧ ಕಾರ್ಯಕ್ರಮಗಳ ಮೂಲಕ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ವಿ. ಆದಿನಾರಾಯಣ ವಾತನಾಡಿ, ಭಾರತೀಯ ಸಂಸ್ಕೃತಿ ಪರಂಪರೆ ಒಂದು ವೈಜ್ಞಾನಿಕ ತಳಹದಿ ಮೇಲೆ ನಿಂತಿದೆ. ಪ್ರತಿಯೊಬ್ಬರೂ ನಮ್ಮ ಕುಟುಂಬದವರೇ ಎಂಬುದನ್ನು ನಮ್ಮ ಹಬ್ಬಗಳು ಹರಿದಿನಗಳು ಸಾರಿ ಹೇಳುತ್ತವೆ. ಈಗಾಗಲೇ ುಟ್ಟುಗುಡಿ ಬಳಿ 2 ಗ್ರಾಪಂಗಳು, ಈಗ 4 ಗ್ರಾಪಂಗಳ ವ್ಯಾಪ್ತಿಯ ಸುವಾರು 10 ಸಾವಿರ ಮಹಿಳೆಯರಿಗೆ ಮಡಿಲು ತುಂಬುವ ಕಾರ್ಯಕ್ರಮ ವಾಡಲಾಗುತ್ತಿದೆ ಎಂದರು.
ಮಹಿಳೆಯರಿಗೆ ಉತ್ತಮ ಸ್ಥಾನವಾನ: ದೇಶದ ಹೆಸರಿನಲ್ಲಿ ಭಾರತಾಂಬೆ, ಗಂಗಾ, ಸಿಂಧೂ, ಕಾವೇರಿ, ನರ್ಮದಾ ಸೇರಿ ನದಿಗಳನ್ನೂ ದೇವತೆಗಳ ಹೆಸರಿನಿಂದ ಗುರುತಿಸಿರುವುದು ಭಾರತೀಯ ಸಂಸ್ಕೃತಿ. ಇಂತಹ ಪರಂಪರೆಯ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಕಾಲಟ್ಟದಲ್ಲಿ ದೀರ್ ಸುಮಂಗಲೀ ಭವ ಕಾರ್ಯಕ್ರಮದ ಮೂಲಕ ಮುಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸಲಾಗುತ್ತಿದೆ. ತಾಲೂಕಿನ ಪ್ರತಿ ಕುಟುಂಬದ ಮಹಿಳೆಯರು ನಮ್ಮ ಸಹೋದರಿಯರು ಎಂಬ ಭಾವನೆಯನ್ನು ಪಕ್ಷದ ಕಾರ್ಯಕರ್ತರಲ್ಲಿ ಮೂಡಿಸುವುದಾಗಿದೆ ಎಂದು ಆದಿನಾರಾಯಣ ತಿಳಿಸಿದರು.
ಹಿರಿಯ ಮುಖಂಡರಾದ ಉತ್ತನೂರು ಶ್ರೀನಿವಾಸ್, ಮೊತ್ತಕಪಲ್ಲಿ ಎಂ.ವಿ. ಸುಭಾಷ್ ಗೌಡ, ಎನ್.ವೆಂಕಟೇಶ್ ಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅವಾನುಲ್ಲಾ, ಮುಖಂಡರಾದ ಚುಂಚುಮಲೆ ರಮೇಶ್, ಸೀಸಂದ್ರ ಗೋಪಾಲಗೌಡ, ಕೊತ್ತೂರು ಗೆಂಗಿರೆಡ್ಡಿ, ಆರ್.ಆಂಜನೇಯಲು, ಆರ್.ಆರ್.ರಾಜೇಂದ್ರ ಗೌಡ, ಸುನೀತಾ ಆದಿನಾರಾಯಣ, ನೀಲಾವತಿ, ಗುಜ್ಜನಹಳ್ಳಿ ಮಂಜುನಾಥ್, ಎಂ.ವೆಂಕಟರಮಣ, ಸಿ.ವಿ.ಗೋಪಾಲ್, ಎಂ. ಗೋಪಾಲ್, ಕಾರ್ಗಿಲ್ ವೆಂಕಟೇಶ್, ಎಂ.ಎನ್.ಶಂಕರನಾರಾಯಣಗೌಡ, ಸಿದ್ದಟ್ಟ ಮುನಿಸ್ವಾಮಿಗೌಡ, ಡಾ.ರಮೇಶ್, ಜ್ಞಾನೇಶ್ ಬಾಬು, ಬಿ.ಎಸ್. ಶಶಿಕಲಾ, ಎಂ. ಎಸ್. ಮಂಜುನಾಥ್, ಆರ್.ಎಸ್.ಸುಭಾಷ್ ಶೆಟ್ಟಿ, ನಾರಾಯಣ ರೆಡ್ಡಿ, ಎಂ.ಸುರೇಶ್, ರಾಮಕೃಷ್ಣಪ್ಪ, ರಂಗಸ್ವಾಮಿ, ನಾಗರಾಜ ರೆಡ್ಡಿ, ರಾಜಪ್ಪ, ಜಮ್ಮನಹಳ್ಳಿ ಕೃಷ್ಣಪ್ಪ ಇದ್ದರು.