2.85 ಲಕ್ಷ ರೂ. ಮೌಲ್ಯದ 14 ಕುರಿಗಳ ಕಳ್ಳತನ

Crime Logo
Published on

ಹಿರೇಕೆರೂರ: ಜಮೀನಿನಲ್ಲಿ ನಿಲ್ಲಿಸಿದ್ದ ಕುರಿಗಳ ಹಿಂಡಿನಿಂದ 2.85 ಲಕ್ಷ ರೂ. ಮೌಲ್ಯದ 3 ಟಗರು ಹಾಗೂ 11 ಕುರಿಗಳನ್ನು ಯಾರೋ ಕಳ್ಳತನ ಮಾಡಿದ ಘಟನೆ ತಾಲೂಕಿನ ಹಿರೇಬೂದಿಹಾಳ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಬೆಳಗಾವಿ ತಾಲೂಕಿನ ಚಿಕ್ಕೋಡಿ ಶಮನವಾಡಿ ಗ್ರಾಮದ ಸಿದ್ದಪ್ಪಾ ಪೀರಪ್ಪ ಕಪಳೇಕರ (48) ಎಂಬುವರ ಕುರಿಗಳು ಕಳ್ಳತನ ಆಗಿರುವುದು.

ಇವರು ಕುರಿಗಳನ್ನು ಮೇಯಿಸಿಕೊಂಡು ಹಿರೇಬೂದಿಹಾಳ ಗ್ರಾಮದ ಬಳಿ ಜಮೀನುವೊಂದರಲ್ಲಿ ನಿಲ್ಲಿಸಿದ್ದರು. ರಾತ್ರಿ ಸಮಯದಲ್ಲಿ ಯಾರೋ ಖದೀಮರು ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಹಂಸಬಾವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net