ಬಂದ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ

The Lakshmi Devi Jatra festival has arrived
The Lakshmi Devi Jatra festival has arrived
Published on

ಮಹಾಲಿಂಗಪುರ: ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಪಟ್ಟಣದ ಬಂದಲಕ್ಷ್ಮಿದೇವಿ ಜಾತ್ರಾ ಮಹೋತ್ಸವ ನಿಮಿತ್ತ ಮಾ.31ರಂದು ಮಾರುತೇಶ್ವರ ಕಾರ್ತಿಕೋತ್ಸವ ಜರುಗಿತು.

ಏ.2ರಂದು ಬೆಳಗ್ಗೆ 5 ಗಂಟೆಗೆ ಮೆರವಣಿಗೆಯ ಮೂಲಕ ಎತ್ತಿನ ಗಾಡಿಗಳಲ್ಲಿ ಹೀರೆಹೊಳಿಯಿಂದ ತಂದ ನೀರಿನೊಂದಿಗೆ ಬಂದಲಕ್ಷ್ಮಿದೇವಿಯ ಅಭಿಷೇಕ, ಮಹಾಪೂಜೆ ಹಾಗೂ ಗ್ರಾಮದ ಎಲ್ಲ ದೇವರ ಅಭಿಷೇಕ ಜರುಗುವುದು. ನಂತರ ಬಂದಲಕ್ಷ್ಮಿದೇವಿ ಅಣ್ಣನಾದ ಮುಗಳಖೋಡ ಗ್ರಾಮದ ಪರಮಾನಂದ ದೇವರು ಮತ್ತು ಹಿಡಕಲ್ ಗ್ರಾಮದ ಲಕ್ಕಮ್ಮದೇವಿ ಪಲ್ಲಕ್ಕಿಗಳು ಆಗಮಿಸುವವು. ಮಧ್ಯಾಹ್ನ 12ಕ್ಕೆ ಕರಿ ಕಟ್ಟುವುದು, ಸಂಜೆ 4ಕ್ಕೆ ಕಡೆ ಓಕುಳಿ, ಸಂಜೆ 7 ಗಂಟೆಗೆ ರಥೋತ್ಸವ ಜರುಗುವುದು. ರಾತ್ರಿ 10 ಗಂಟೆಗೆ ಮನೋರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಏ.3ರಂದು ಮುಂಜಾನೆ 10 ಗಂಟೆಗೆ ಕಾರ್ತಿ ಇಳಿಸುವುದು, ಮಧ್ಯಾಹ್ನ 3 ಗಂಟೆಗೆ ಜಂಗಿ ನಿಕಾಲಿ ಕುಸ್ತಿಗಳು, ಸಂಜೆ 7 ಗಂಟೆಗೆ ಮರು ರಥೋತ್ಸವ ಜರುಗುವುದು. ರಾತ್ರಿ 10.30ಕ್ಕೆ ನಾಟಕ ಮತ್ತು ಗೀಗೀ ಪದಗಳು ಇರುತ್ತವೆ.

ಏ.4ರಂದು ಮಧ್ಯಾಹ್ನ 12ಕ್ಕೆ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಗಳು ನಡೆಯಲಿವೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.

ಪಟ್ಟಣದ ಪ್ರಮುಖರಾದ ಧರೆಪ್ಪ ಸಾಂಗಲಿಕರ, ಪಂಡಿತ ಪೂಜಾರ, ರಾಮನಗೌಡ ಪಾಟೀಲ, ಚಿಕ್ಕಪ್ಪ ನಾಯಕ, ಕಾಡಯ್ಯ ಗಣಾಚಾರಿ, ಮಲ್ಲು ಹೊಸಪೇಟೆ, ಈಶ್ವರ ಅಮಾತಿ, ಮೋಹನರಾವ ಕುಲಕರ್ಣಿ, ಲಕ್ಕಪ್ಪ ಮೇಡ್ಯಾಗೋಳ, ಮಹಾಲಿಂಗಪ್ಪ ಕೊಣ್ಣೂರ, ಚೆನ್ನಪ್ಪ ಪುರಾಣಿಕ, ಮುತ್ತಪ್ಪ ಸಿದ್ದಾಪುರ, ಹರೀಶ ಪಾಟೀಲ, ಮುತ್ತಪ್ಪ ಹೊಸಪೇಟೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net