ಕೆರೆಗಳು ಭರ್ತಿಯದರು ನಗರ ಪ್ರದೇಗಳಿಗೆ ನೀರಿಲ್ಲ!

raichur
raichur
Published on

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಕೆರೆಗಳು ಭರ್ತಿಯಾಗಿದ್ದರು ಸಹ ನಗರ ಸೇರಿ ಜಿಲ್ಲೆಯ ಪಟ್ಟಟ ಪ್ರದೇಶದಲ್ಲಿ ನೀರಿಗಾಗಿ ಆಹಾಕಾರ ಶುರುವಾಗಿದೆ.

ಮಳೆಗಾಲದಲ್ಲಿ ತುಂಗಾಭದ್ರ ಜಲಾಶಾಯದ ೧೯ ನೇ ಗೇಟ್ ಕಿತ್ತುಹೊದರು, ಉತ್ತಮ ಮಳೆಯಿಂದ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಆದರೆ ಬೇಸಿಗೆ ಪ್ರಾರಂಭದಿAದ ನಗರ ಪ್ರದೇಶದ ಜನರು ಮಾತ್ರ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡಲು ಸಾಧ್ಯವಾಗದೆ ಇರುವುದರಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೂರು ದಿನಕೊಮ್ಮೆ ನೀರು

ಜಿಲ್ಲೆಯ ಜಿಲ್ಲಾಡಳಿತ ಅಽನದಲ್ಲಿ ಒಂದು ಮಹಾನಗರ, ನಗರಾಭಿವೃದ್ದಿ ಕೋಶದ ಅಽನದಲ್ಲಿ ೧ ನಗರಸಭೆ, ೫ ಪುರಸಭೆ ಹಾಗೂ ೫ ಪಟ್ಟಣ ಪಂಚಾಯಿತಿ ಸೇರಿ ಒಟ್ಟು ೨೬೦ ವಾರ್ಡ್ಗಳು ಇವೆ. ಈ ಪ್ರದೇಶಗಳಲ್ಲಿ ತುಂಗಭದ್ರಾ ಜಲಾಶಯ, ನಾರಾಯಣಪುರ ಜಲಾಶಯದ ನಾಲೆಗಳ ಮೂಲಕ ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದ್ದು, ಜನಸಂಖ್ಯೆ ಹೆಚ್ಚಳವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಾಣಗೊಂಡಿದೆ. ಇದರ ಪೈಕಿ ರಾಯಚೂರು,ಸಿಂಧನೂರು ನಗರದಲ್ಲಿ ಮೂರು ರಿಂದ ನಾಲ್ಕು ದಿನಕೊಮ್ಮೆ,ಮುದಗಲ್ ಪಟ್ಟಣದಲ್ಲಿ ವಾರಕೊಮ್ಮೆ, ಹಟ್ಟಿ,ತುರವಿಹಾಳ ಪಟ್ಟಣದಲ್ಲಿ ೫ ದಿನಕೊಮ್ಮೆ,ಲಿಂಗಸೂಗೂರು,ಮಾನ್ವಿಯಲ್ಲಿ ಮೂರು ದಿನಕೊಮ್ಮೆ ಹಾಗೂ ದೇವದುರ್ಗದಲ್ಲಿ ೨ ದಿನಕೊಮ್ಮೆ ನೀರು ಸೊರಬರಾಜು ಮಾಡಲಾಗುತ್ತಿದ್ದು,ಇದರಿಂದ ಸರ್ವನಿಕರು ನೀರಿಗಾಗಿ ಪರದಾಡುವಂತಾಗಿದೆ.

ಹಳ್ಳ ಇಡಿದ ಕುಡಿಯುವ ನೀರಿನ ಯೋಜನೆ

ನಗರದಲ್ಲಿ ೨೭ ಗಂಟೆ ಕುಡಿಯುವ ನೀರಿನ ಯೋಜನೆಯು ಕೇವಲ ಹೆಸರಿಗೆ ಮಾತ್ರ ಪೂರ್ಣಗೊಂಡಿದ್ದು, ಜಿಲ್ಲೆಯ ಯಾವುದೇ ಪ್ರದೇಶಕ್ಕೆ ತೆರಳಿದರು, ನೀರು ಬರುವುದಿಲ್ಲ ಆದರೆ ಅಽಕಾರಿಗಳು ಮಾತ್ರ ಶೇ.೫೦ ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.

ಹೆಸರಿಗೆ ಮಾತ್ರ ಕೆರೆಗಳು ಭರ್ತಿ

ಇತ್ತಿಚ್ಚಿಗೆ ಬೇಸಿಗೆಯಲ್ಲಿ ಕುಡಿಯವ ನೀರಿಗೆ ಸಂಬAಽಸಿದAತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಅಽಕಾರಿಗಳು ಹೇಳುವ ಪೈಕಿ ೨೪೩ ಕೆರೆಗಳು -ÀÇರ್ತಿ ತುಂಬಿದ್ದು, ೨೦ ಕೆರೆಗಳು ಮಾತ್ರ ಭಾಗಶಃ ತುಂಬಿವೆ ಎಂದು ಮಾಹಿತಿ ನೀಡಲಾಗಿದೆ. ಆದರೆ ವಾಸ್ತವವಾಗಿ ಜಿಲ್ಲೆಯ ಬಹುತೇಕ ಕರೆಗಳು ಖಾಲಿಯಾಗಿದ್ದು, ನೀರಿಗಾಗಿ ಜನರು ಮಾತ್ರ ಆಹಾಕಾರ ಎದುರಿಸುತ್ತಿದ್ದಾರೆ.

ಜನಪ್ರತಿನಿಽಗಳ ಮೌನ

ಸ್ವಪ್ರತಿಷ್ಟೆಗಾಗಿ ಜಿಲ್ಲೆಯ ರಾಜಕಾರಣಿಗಳು ಕುಡಿಯುವ ನೀರಿನ ಬಗ್ಗೆ ಚಕಾರವೆತ್ತದೆ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.ಅಽಕಾರಿಗಳು ಮತ್ತು ಜನಪ್ರತಿನಿಽಗಳು ಜನರ ದಾಹ ತೀರಿಸಲು ಮುಂದಾಗದಿದ್ದರೆ ಜನರು ಬೀದಿಗಿಳಿದು ಹೋರಾಟ ಮಾಡುವ ದಿನಗಳು ದೂರವಿಲ್ಲ ಎಂಬುದನ್ನು ಅರಿಯಬೇಕಿದೆ.

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೦೮ ಜನ ನೋಡಲ್ ಅಽಕಾರಿಗಳನ್ನು ನೇಮಕ ಮಾಡಲಾಗಿದೆ.ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾದರೆ ನೋಡಲ್ ಅಽಕಾರಿಗಳಿಗೆ ದೂರು ಸಲ್ಲಿಸಬಹುದು.

ಡಾ.ಶರಣ ಪ್ರಕಾಶ ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net