ಕಾರ್ಮಿಕರ ಕಾಯ್ದೆ ರದ್ದುಗೊಳಿಸಲಿ

20RAM3
Published on

ರಾಮದುರ್ಗ: ದುಡಿಯುವ ಜನತೆಗೆ ಸಂಚಕಾರ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸಿಐಟಿಯು ನೇತತ್ವದಲ್ಲಿ ಪಟ್ಟಣದ ಡಾ.ಎಪಿಜೆ ಅಬ್ದುಲ್ ಕಲಾಂ ವತ್ತದಲ್ಲಿ ಸಂಹಿತೆ ನೋಟಿಫಿಕೇಷನ್ ಪ್ರತಿ ಸುಟ್ಟು ಕಾರ್ಮಿಕ ಸಂಘಟನೆ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಜಿ.ಎಂ. ಜೈನೆಖಾನ್, ಶ್ರಮಮೇವ ಜಯತೆ ಘೋಷಣೆಯೊಂದಿಗೆ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕಾನೂನು ರೂಪಿಸುತ್ತಿದೆ. ದುಡಿಯುವ ಜನರಿಗೆ ದೊರೆಯುವ ಸೌಲಭ್ಯಗಳನ್ನು ಕಸಿದುಕೊಳ್ಳುವ ನೀತಿ ಅನುಸರಿಸುತ್ತಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ, ತಾಹೀರಾ ಮಕಾನದಾರ, ವಿಜಯಲಕ್ಷ್ಮೀ ಸಿದ್ದಿಬಾಂವಿ, ಯಶೋಧಾ ಹೊಸಕೋಟಿ, ಬೋರಮ್ಮ ತೆಕ್ಕಿ, ಪಂಚಾಯತ ನೌಕರರ ಸಂಘದ ತಾಲೂಕಾಧ್ಯಕ್ಷ ದಿಲೀಪ್ ಭೋವಿ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ತುಳಸಮ್ಮ ಮಾಳದಕರ, ಮೆಹಬೂಬ್ ನದ್ಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net