ಸ್ವಚ್ಛವಾಯಿತು ಕೊಯಿರಾ ಸಮುದಾಯ ಭವನ, ಶಾಸಕ ನಿಸರ್ಗ ನಾರಾಯಣಸ್ವಾಮಿ ಮುತುವರ್ಜಿ, ವಿಜಯವಾಣಿ ವರದಿಗೆ ಎಚ್ಚೆತ್ತ ಅಧಿಕಾರಿಗಳು

A-10-KND-PHOTO-1b
Published on

ಕುಂದಾಣ: ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದ್ದ ಇಲ್ಲಿಯ ಕೊಯಿರಾ ಸಮುದಾಯ ಭವನಕ್ಕೆ ಕೊನೆಗೂ ಕಾಯಕಲ್ಪ ದೊರಕಿದೆ. ಭವನದ ಸುತ್ತಮುತ್ತ ಗಿಡ-ಗಂಟಿಗಳು ಬೆಳೆದು ನಿರುಪಯುಕ್ತವಾಗಿತ್ತು. ಈ ಬಗ್ಗೆ ಅ.5ರಂದು ವಿಜಯವಾಣಿ ‘ಉಪಯೋಗಕ್ಕೆ ಬಾರದ ಸಮುದಾಯ ಭವನ’ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಸಿಬಿ ಮೂಲಕ ಭವನದ ಆವರಣ ಸ್ವಚ್ಛಗೊಳಿಸಿದ ಬಳಿಕ ಸಮುದಾಯ ಭವನವನ್ನು ಸಾರ್ವಜನಿಕ ಬಳಕೆಗೆ ಯೋಗ್ಯವಾಗಿಸಿದ್ದಾರೆ. ಜತೆಗೆ ಕಟ್ಟಡ ದುರಸ್ತಿಗೊಳಿಸಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಶಿವಕುಮಾರ್ ತಿಳಿಸಿದ್ದಾರೆ.

ಹತ್ತು ವರ್ಷದಿಂದ ಭವನ ಪಾಳು ಬಿದ್ದಿತ್ತು. ವರದಿ ಪ್ರಕಟವಾದ ತಕ್ಷಣ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಅದರ ಸುತ್ತ ಸ್ವಚ್ಛಗೊಳಿಸಿ, ಕಟ್ಟಡದ ದುರಸ್ತಿಗೆ ಮುಂದಾಗಿರುವುದು ಶ್ಲಾಘನೀಯ. ಕೊಯಿರಾ ಬಾಬು, ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net