

ಹುಬ್ಬಳ್ಳಿ: ಇಲ್ಲಿಯ ಸಿಬಿಟಿ ಮಸೀದಿಯೊಂದರ ಮುಂದೆ ಕುಳಿತಿದ್ದ ವ್ಯಕ್ತಿಗೆ ಧಮಕಿ ಹಾಕಿ ಚಾಕುವಿನಿಂದ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು
ಮಂಟೂರ ರಸ್ತೆಯ ಭಾರತಿ ಕಾಲನಿ ನಿವಾಸಿ ಇಕ್ಬಾಲ್ ಸಿತಾರವಾಲೆ (41) ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಅಫ್ತಾಬ್ ಪಠಾಣ, ಮಲಿಕ್ ಪಠಾಣ, ಸಾಧಿಕ್ ಕಿತ್ತೂರ, ಫರ್ದೀನ್ ಅಲಿಯಾಸ್ ಸೂನು ಪಠಾಣ, ಮಹ್ಮದ್ ಉಝೈಫ್ ಮೈಬೂಬ್ ಅಲಿ ಅವರನ್ನು ಬಂಧಿಸಲಾಗಿದೆ.
ನಮಾಜ್ ಮುಗಿಸಿಕೊಂಡು ಬಂದು ಇಕ್ಬಾಲ್ ಮಸೀದಿ ಮುಂದೆ ಬಂದು ಕುಳಿತಿದ್ದ ವೇಳೆ ಬಂದ ಆರೋಪಿಗಳು, ಕ್ಷುಲ್ಲಕ ಕಾರಣಕ್ಕೆ ತಂಟೆ ತೆಗೆದು ಚಾಕು ಇರಿದಿದ್ದರು. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.