ದಿ ಕಿಂಗ್ಸ್ ತಂಡ ಚಾಂಪಿಯನ್

h1-the kings
Published on

ಹುಬ್ಬಳ್ಳಿ: ನಗರದ ಜಿಮ್ಖಾನ ಕ್ಲಬ್​ನಲ್ಲಿ ನಡೆದ ಜಿಮ್ಾನಾ ಪ್ರೀಮಿಯರ್ ಲೀಗ್ (ಜಿಪಿಎಲ್) 7ನೇ ಆವೃತ್ತಿಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯಪ್ರಕಾಶ ಶೆಟ್ಟಿ ಹಾಗೂ ಸತೀಶ ಶೆಟ್ಟಿ ಮಾಲೀಕತ್ವದ ದಿ ಕಿಂಗ್ಸ್ ತಂಡ ಚಾಂಪಿಯನ್ ಆಗಿದೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಲೆಗ್ ಬ್ರೇಕರ್ಸ್ ತಂಡವನ್ನು 3-2 ಸೆಟ್​ಗಳ ಅಂತರದಿಂದ ಗೆಲುವು ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಅತ್ಯುತ್ತಮ ಆಟಗಾರರಾಗಿ ವಿಶ್ವನಾಥನ ಉಪ್ಪಿನ, ಗೌರವ ಜವಳಿ, ರಮೇಶ ಮಾಂಡ್ರೆ ಹಾಗೂ ಸಂಜಯ ಗಾಮಿ ಪ್ರಶಸ್ತಿ ಪಡೆದರು.

ಪ್ರಶಸ್ತಿ ವಿತರಿಸಿದ ಕ್ಲಬ್ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ಜಿಪಿಎಲ್ ಒಂದು ಪಂದ್ಯಾವಳಿಯಷ್ಟೇ ಅಲ್ಲ, ಸಾಮಾಜಿಕ ಕಳಕಳಿ ಸಹ ಹೊಂದಿದೆ. ಪ್ರತಿ ವರ್ಷದಂತೆ ಈ ಬಾರಿ ‘ಗಿಡ ಬೆಳೆಸಿ ಪರಿಸರ ಉಳಿಸಿ’ ಎಂಬ ಧೈಯದೊಂದಿಗೆ ಎಲ್ಲ ಆಟಗಾರರಿಗೂ ಗಿಡಗಳನ್ನು ವಿತರಿಸಿ ಬೆಳೆಸಲು ಪ್ರೋತ್ಸಾಹಿಸುವಂಥ ಪ್ರಶಂಸನೀಯ ಕಾರ್ಯ ಮಾಡಿದೆ ಎಂದರು.

ಕ್ಲಬ್ ಕಾರ್ಯದರ್ಶಿ ಜಗದೀಶ ಕಲ್ಯಾಣ ಶೆಟ್ಟರ್ ಸ್ವಾಗತಿಸಿದರು. ಜಿಪಿಎಲ್ ಆಯೋಜಕ ಗಿರೀಶ ವೀಣಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net