

ವಿಜಯವಾಣಿ ವಿಶೇಷ ರಾಣೆಬೆನ್ನೂರ
ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನಹಣ್ಣು ಸ್ಥಳೀಯ ವಾರುಕಟ್ಟೆಗೆ ವಾರಾಟಕ್ಕೆ ಬಂದಿದ್ದು, ಗ್ರಾಹಕರಿಂದ ಖರೀದಿಯೂ ಜೋರಾಗಿಯೇ ನಡೆದಿದೆ.
ನಗರದ ಎಂ.ಜಿ. ವಾರುಕಟ್ಟೆ, ತರಕಾರಿ ಮಾರುಕಟ್ಟೆ, ನೆಹರು ವಾರುಕಟ್ಟೆಗಳಲ್ಲಿ ವಾವಿನ ಹಣ್ಣಿನ ಪರಿಮಳ ಘಮಘಮಿಸುತ್ತಿವೆ. ಕಲ್ಮಿ, ಆಪೂಸ್, ಮಲ್ಲಿಕಾ, ಕೇಸರ್, ಸಿಂಧೂಲ, ಬದಾಮಿ, ವೆನಿಷಾ, ರಸಪುರಿ ಸೇರಿ ವಿವಿಧ ಬಗೆಯ ವಾವಿನ ಹಣ್ಣುಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಗ್ರಾಹಕರು ತಮಗಿಷ್ಟವಾದ ಹಣ್ಣುಗಳನ್ನು ಖರೀದಿಸಲು ಮುಂದಾಗುತ್ತಿದ್ದು, ವ್ಯಾಪಾರಸ್ಥರಲ್ಲಿ ಸಂತಸ ಮೂಡಿಸಿದೆ.
ಈ ತಿಂಗಳ ಆರಂಭದಿಂದಲೇ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ವಾವಿನ ಹಣ್ಣುಗಳು ಗ್ರಾಹಕರ ಗಮನ ಸೆಳೆಯಬೇಕಾಗಿತ್ತು. ಆದರೆ, ಈ ಬಾರಿ ಸ್ಥಳೀಯ ವಾವು ಬೆಳೆಗಾರರ ಫಸಲು ಉತ್ತಮವಾಗಿ ಬಾರದಿರುವ ಕಾರಣ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳು ನಿರೀಕ್ಷೆಗಿಂತ ಕಡಿಮೆ ಪ್ರವಾಣದಲ್ಲಿ ಬಂದಿತ್ತು. ಆದರೀಗ ಹಾನಗಲ್ಲ, ದಾವಣಗೆರೆ, ಶಿವಮೊಗ್ಗ, ಧಾರವಾಡ ಭಾಗದಿಂದ ಮಾವಿನ ಹಣ್ಣುಗಳು ವಾರುಕಟ್ಟೆಗೆ ಆವಕವಾಗುತ್ತಿದ್ದು, ಗ್ರಾಹಕರ ಗಮನ ಸೆಳೆಯುತ್ತಿವೆ. ಮುಂದಿನ 15 ದಿನಗಳ ನಂತರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾವು ಬರುವ ನಿರೀಕ್ಷೆಯಿದೆ ಎಂದು ವ್ಯಾಪಾರಸ್ಥರು ತಿಳಿಸುತ್ತಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಣ್ಣಿನ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದ್ದರೂ ಹಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ಬೆಲೆಯಿದೆ. ಕಳೆದ ಬಾರಿ ಕಲ್ಮಿ ಮಾವಿನ ಹಣ್ಣು 180 ರೂ.ನಿಂದ 200 ರೂ.ಗೆ ಕೆಜಿಯಿದ್ದರೆ, ಈ ಬಾರಿ 250 ರಿಂದ 270 ರೂ. ಬೆಲೆಯಿದೆ. ಆಪೂಸ್ ಕಳೆದ ಬಾರಿ 150ರಿಂದ 200 ರೂ. ವರೆಗಿತ್ತು. ಈ ಬಾರಿ 250ರಿಂದ 300 ರೂ. ವರೆಗಿದೆ. ರಸಪುರಿ 120ರಿಂದ 150 ರೂ., ಬಾದಾಮಿ 150ರಿಂದ 180 ರೂ., ವೆನಿಷಾ 120ರಿಂದ 180 ರೂ. ವರೆಗೂ ವಾರಾಟವಾಗುತ್ತಿವೆ. ಸಿಂಧೂರ ವಾವು 100ರಿಂದ 150 ರೂ.ಗೆ ಕೆ.ಜಿ.ಯಂತೆ ಮಾರಾಟ ಮಾಡಲಾಗುತ್ತಿದೆ.
ಆರಂಭದಲ್ಲಿ ಮಾವಿನ ಗಿಡಗಳು ಅಧಿಕ ಪ್ರಮಾಣದಲ್ಲಿ ಹೂ ಬಿಟ್ಟಿದ್ದರಿಂದ ಸಹಜವಾಗಿಯೇ ಸ್ಥಳೀಯ ಮಾವು ಬೆಳೆಗಾರರಲ್ಲಿ ಹರ್ಷ ಮೂಡಿತ್ತು. ಉತ್ತಮ ಫಸಲಿನ ಭರವಸೆ ಮೂಡಿತ್ತು. ಆದರೆ, ಅತಿಯಾದ ಬಿಸಿಲಿನ ಪ್ರಖರತೆ ಮತ್ತು ಆಗಾಗ ಗಾಳಿ ಸಮೇತದ ಸುರಿದ ಮಳೆಯಿಂದಾಗಿ ಮಾವಿನ ಹೂಗಳು ಕಾಯಿ ಕಟ್ಟುವ ಮೊದಲೇ ನೆಲಕಚ್ಚಿದ್ದವು. ಇದರಿಂದ ಸ್ಥಳೀಯವಾಗಿ ಮಾವು ಬೆಳೆಯಲ್ಲಿ ಕುಂಠಿತವಾಗಿದೆ. ಹೀಗಾಗಿ ಸದ್ಯ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಮಾವು ಮಾರುಕಟ್ಟೆಗೆ ಬರಲಾರಂಭಿಸಿದೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉತ್ತಮ ಹಾಗೂ ವಿವಿಧ ಬಗೆಯ ಮಾವಿನ ಹಣ್ಣುಗಳು ವಾರುಕಟ್ಟೆಗೆ ಬಂದಿವೆ. ಮಳೆ ಉತ್ತಮವಾಗಿರುವ ಕಾರಣ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಕೂಡ ಹೆಚ್ಚು ಕಡಿಮೆ ಇದೆ. ವಾರುಕಟ್ಟೆಗೆ ಇನ್ನೂ ಹೆಚ್ಚಿನ ಮಾವು ಬರುವ ನಿರೀಕ್ಷೆಯಿದೆ. ಸದ್ಯ ಮಾವುಗಳ ವಾರಾಟ ಉತ್ತಮವಾಗಿದೆ. ಚಂದ್ರಪ್ಪ ಕಡೇಮನಿ, ಮಾವು ವ್ಯಾಪಾರಸ್ಥರು