ಗುರುವಿನ ಉಪಕಾರ ಮರೆಯಲಾಗದು

The kindness of a teacher cannot be forgotten.
ಕೊಲ್ಹಾರ ತಾಲೂಕಿನ ಕಲಗುರ್ಕಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಜರುಗಿತು, ಹಾಸಿಂಪೀರ ವಾಲಿಕಾರ, ಮಹಮ್ಮದ ಗೌಸ ಹವಾಲ್ದಾರ ,ಐ ಬಿ ಬಾಗಲಕೋಟ,ಕೆ.ಪಿ. ಬೀರಗೊಂಡ ಇತರರಿದ್ದರು.
Published on

ಕೊಲ್ಹಾರ: ಗುರುವಿನ ಉಪಕಾರ ಎಂದಿಗೂ ಮರೆಯಲಾಗದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ತಾಲೂಕಿನ ಕಲಗುರ್ಕಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 2001- 2002ರ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರು ವಂದನ ಹಾಗೂ ಸ್ನೇಹಿತರ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗುರು ಶಿಷ್ಯರ ಸಂಬಂಧ ನಿರಂತರವಾಗಿರಬೇಕು. ವಿದ್ಯಾರ್ಥಿಗಳು ಶಿಕ್ಷಕರ ಬಗ್ಗೆ ಅಭಿಮಾನ ಬೆಳಿಸಿಕೊಳ್ಳಬೇಕು, ಪ್ರತಿ ಮಗುವಿನ ಶೈಕ್ಷಣಿಕ ಸವಾರ್ಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

ಮಹ್ಮದ ಗೌಸ ಹವಾಲ್ದಾರ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆದಣ್ಣ ಮುಕ್ತಿ ಎನ್ನುವಂತೆ ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ಸಾಗಬೇಕು. ಬಸವಾದಿ ಶರಣರು ಗುರುವಿಗೆ ಪವಿತ್ರ ಪುಣ್ಯ ಸ್ಥಾನ ನೀಡಿದ್ದಾರೆ ಎಂದರು.

ಕೃಷಿ ವಿಜ್ಞಾನಿ ಡಾ.ಮಹಾಂತೇಶ ಶಿರೂರ, ಎಸ್.ಎಸ್.ಬಿರಾದಾರ, ಎಸ್.ಡಿ. ನ್ಯಾಮಗೊಂಡ, ಎಚ್.ಎಲ್.ಹೊನ್ನಾಳಿ, ಶ್ರೀಕಾಂತ ದ್ಯಾಸಾಳ, ಅಶೋಕ ಆಸಂಗಿ, ಸುಮಂಗಲಾ ಬೇವೂರ, ಎಸ್.ಎಸ್. ಪಾಟೀಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net