

ಚಿಕ್ಕಮಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. ೧೦೦ರಷ್ಟು ಮೀಸಲಾತಿ ಕೊಡಬೇಕೆಂಬ ಕಾಯ್ದೆ ರೂಪಿಸಲು ರಾಜ್ಯಸರ್ಕಾರ ಮುಂದಾಗಿರುವ ಕ್ರಮದಿಂದ ಹಿಂದೆ ಸರಿಯಬಾರದು ಎಂದು ಜಿಲ್ಲಾ ಕನ್ನಡಸೇನೆ ಮುಖಂಡರು ಎಡಿಸಿ ನಾರಾಯಣರಡ್ಡಿ ಕನಕರಡ್ಡಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ನಾಡು, ನುಡಿ ಗೌರವಿಸುವ ಹಾಗೂ ಭಾಷೆ ಬೆಳವಣಿಗೆ ಒತ್ತು ನೀಡುವ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಖಾಸಗಿ ವಲಯದಲ್ಲಿ ಶೇ. ೧೦೦ರಷ್ಟು ಕನ್ನಡಿಗರ ಮೀಸಲಾತಿ ನೀಡುವ ಸಂಬAಧ ಸದನದಲ್ಲಿ ವಿಧೇಯಕ ಮಂಡಿಸಲು ಮುಂದಾದರೆ ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳು ಸಾರಸಗಟಾಗಿ ಸರ್ಕಾರದ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದರು.
ಖಾಸಗಿ ಕಂಪನಿಗಳಿಗೆ ನಾಡಿನ ನೆಲ, ಜಲ, ಗಾಳಿ ಅನುಭವಿಸಲು ರಾಜ್ಯದಲ್ಲಿ ಸ್ಥಳಬೇಕು. ಆದರೆ ಉದ್ಯೋಗಕ್ಕೆ ಮಾತ್ರ ಕನ್ನಡಿಗರು ಬೇಡ ಎನ್ನುವುದು ಸರಿಯಲ್ಲ. ಹೀಗಾಗಿ ಇಂಥ ಕಂಪನಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಕನ್ನಡಿಗರಿಗೆ ಉದ್ಯೋಗದ ಸಂಬAಧ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು. ಒಂದು ವೇಳೆ ನಿರ್ಲಕ್ಷÈ ಧೋರಣೆ ಅನುಸರಿಸಿದರೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕನ್ನಡಸೇನೆಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನವೆಂಬರ್ ೧ರ ರಾಜ್ಯೋತ್ಸವ ದಿನದಂದು ರಾಜ್ಯದ ಪ್ರತಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭಾವುಟ ಹಾರಿಸಬೇಕೆಂದು ಆದೇಶಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ಹುಣಸೆಮಕ್ಕಿ ಲಕ್ಷö್ಮಣ್, ಶಂಕರೇಗೌಡ, ಸತೀಶ್, ಅನ್ವರ್, ವಿನಯ್, ಪಾಲಾಕ್ಷಿ, ಹರೀಶ್, ಪುಷ್ಪ ಮತ್ತಿತರರಿದ್ದರು.