

ಮಂಗಳೂರು : ಫೀನಿಕ್ಸ್ ಫಿಲಿಂಸ್ ಬ್ಯಾನರನಡಿ ಮಹೇಂದ್ರ ಕುಮಾರ್ ನಿರ್ಮಾಣ ಹಾಗೂ ಗೌರಿ ಶ್ರೀನಿವಾಸ ನಿರ್ದೇಶನದಲ್ಲಿ ತಯಾರಾದ ದಿ ಜರ್ನಿ ಆಫ್ ಬೆಳ್ಳಿ ಕನ್ನಡ ಸಿನಿಮಾ ಶುಕ್ರವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಪಿರಿಯಾಪಟ್ಟಣದಲ್ಲಿ ತೆರೆಕಂಡಿದೆ. ಸಿನಿಮಾಕ್ಕೆ ಪ್ರೇಕ್ಷಕರಿಂದ ಅಭೂತ ಪೂರ್ವ ಮೆಚ್ಚುಗೆ ದೊರೆತಿದೆ.
ಮಂಗಳೂರಿನ ಭಾರತ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ಚಿತ್ರದ ಬಿಡುಗಡೆ ಸಮಾರಂಭ ನಡೆಯಿತು. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ ನಾನೊಬ್ಬ ಸೈನಿಕನಾಗಿ ಈ ದೇಶದ ಸೈನಿಕರ ಮಕ್ಕಳ ಜೀವನದಲ್ಲಿ ನಡೆಯುವ ಪ್ರಸಂಗಳು ಚಿತ್ರದಲ್ಲಿ ಮೂಡಿ ಬರುವುದು ಅಪರೂಪ. ಈ ಚಿತ್ರವು ಯಶಸ್ವಿಯಾಗಲಿದೆ ಎಂದು ಶುಭ ಹಾರೈಸಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ‘ ಸೈನಿಕ ಅವರ ಮಕ್ಕಳ ನಡುವೆ ಸಂಬಂಧಗಳ ಘಟನೆಗಳು ಈ ಚಿತ್ರದಲ್ಲಿ ತೋರಿಸಿದ್ದು ಗಮರ್ನಾಹ ಎಮದರು. ಸ್ಪೀಕರ್ ಯು.ಟಿ ಖಾದರ್ ಮಾತನಾಡಿ ‘ ಈ ಚಿತ್ರವನ್ನು ಕುಟುಂಬ ಸಮೇತ ಬಂದು ಈ ನೋಡಿ ಬೆಂಬಲಿಸಬೇಕು ಎಂದರು.
ನಿರ್ಮಾಪಕ ಮಹೇಂದ್ರಕುಮಾರ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ರಾಜ್‌ಗೋಪಾಲ್ ರೈ, ಅಮರನಾಥ ರೈ, ನಟ ನವೀನ ಬೊಂದೆಲ್, ಕಾರ್ಪೋರೇಟರ್ ಶಂಸುದ್ಧೀನ್, ಧನುಷ್ ರೈ, ಸಚಿನ್ ರೈ ಉಪಸ್ಥಿತರಿದ್ದರು.