

ಆಭರಣ ಪ್ರಿಯರಿಗಾಗಿ ನಗರದ ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ ‘ದ ಜ್ಯುವೆಲ್ಲರಿ ಶೋ ಪ್ರದರ್ಶನ ಮತ್ತು ಮಾರಾಟ ಮೇಳ’ಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಗೋಲ್ಡನ್ ಕ್ರೀಪರ್ ಸಂಸ್ಥೆ ವತಿಯಿಂದ ಆಯೋಜಿಸಿರುವ ಚಿನ್ನಾಭರಣ ಮೇಳವನ್ನು ನಟಿ ಅಮೃತಾ ಪ್ರೇಮ್ ಉದ್ಘಾಟಿಸಿ ಚಿನ್ನಾಭರಣಗಳ ಮಳಿಗೆಗಳಲ್ಲಿನ ವಿಶಿಷ್ಟ ಆಭರಣಗಳನ್ನು ಧರಿಸಿ ಸಂಭ್ರಮಿಸಿದರು.
ಬಳಿಕ ಮಾತನಾಡಿದ ಅವರು, ಮಹಿಳೆಯರಿಗೆ ಚಿನ್ನಾಭರಣ ಹಾಗೂ ವಜ್ರಾಭರಣ ಎಂದರೆ ಅಚ್ಚುಮೆಚ್ಚು. ಆಭರಣ ತೊಡುವುದೆಂದರೆ ಮಹಿಳೆಯರಿಗೆ ಹೆಚ್ಚಿನ ಸಂಭ್ರಮ. ಮೈಸೂರಿನಲ್ಲಿ ಇಂತಹ ಮೇಳವನ್ನು ಆಯೋಜಿಸಿ, ಚಿನ್ನಾಭರಣ ಮಾರಾಟ ಮಾಡುವುದರಿಂದ ಜನರಿಗೆ ತುಂಬ ಅನುಕೂಲವಾಗುತ್ತದೆ. ಒಂದೇ ಕಡೆ ವಿಶಿಷ್ಟ ಶೈಲಿಯ ಆಭರಣಗಳು ದೊರೆಯುತ್ತಿದ್ದು, ಸಾರ್ವಜನಿಕರು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮೇಳದಲ್ಲಿ ಮೈಸೂರಿನ ಡಾರ್ಲ ಗೋಲ್ಡ್, ರಾಜ್ ಡೈಮಂಡ್ಸ್, ಪ್ರಕಾಶ್ ಜ್ಯುವೆಲ್ಲರ್ಸ್, ಬೆಂಗಳೂರಿನ ದವನಂ, ನವರತನ್ ಅಂಡ್ ಸನ್ಸ್ , ಪಂಚಕೇಸರಿ ಬಡೇರಾ, ಆರ್ಟಿ ಇಂಡಿಯಾ, ಸಪ್ತೋಷಿ, ವಂಡರ್ ಡೈಮಂಡ್ಸ್, ಗಜರಾಜ್, ಎಂ.ಪಿ.ಜ್ಯುವೆಲ್ಲರ್ಸ್, ಸಿಂಹ ಜ್ಯುವೆಲ್ಲರ್ಸ್, ಟ್ರೇಶರ್ ಬೈ ನವರತನ್, ಸುನಿಲ್ ಜ್ಯುವೆಲ್ಲರ್ಸ್ ಸೇರಿದಂತೆ 30ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳಲ್ಲಿ ಚಿನ್ನದ ಸರ, ಬಳೆ, ನೆಕ್ಲೆಸ್, ಚಿನ್ನದ ಓಲೆಗಳು, ಸೇರಿದಂತೆ ನಾನಾ ತರಹದ ಚಿನ್ನಾಭರಣಗಳು ಆಭರಣ ಪ್ರಿಯರನ್ನು ಆಕರ್ಷಿಸುತ್ತಿವೆ.
ಮದುವೆ ಸಂಭ್ರಮ ಹಾಗೂ ಹಬ್ಬಗಳ ಶುಭ ಸಮಾರಂಭಕ್ಕೆ ಚಿನ್ನಾಭರಣ ಖರೀದಿ ಮಾಡಲು ಒಂದೇ ಸೂರಿನಡಿ ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ, ಬಜೆಟ್‌ಗೆ ಅನುಗುಣವಾಗಿ ಚಿನ್ನಾಭರಣಗಳಿವೆ. ಪ್ರದರ್ಶದಲ್ಲಿ ಚಿನ್ನದ ಆಭರಣಗಳು ಬಿಐಎಸ್ ಹಾಲ್ ಮಾರ್ಕ್ ಹೊಂದಿದ್ದು, ವಜ್ರಾಭರಣಗಳು ಅಂತಾರಾಷ್ಟ್ರೀಯ ಗುಣಮಟ್ಟದ ಜಿಐಎ ಅಥವಾ ಐಜಿಐ ಪ್ರಮಾಣಿತ ಹೊಂದಿದೆ. ಖರೀದಿದಾರರು ಹಳೇ ಚಿನ್ನವನ್ನು ಬದಲಾಯಿಸಿಕೊಳ್ಳುವ ಅವಕಾಶವೂ ಇದೆ.
ಗೋಲ್ಡನ್ ಕ್ರೀಪರ್ ಸಂಸ್ಥೆಯ ಬಿ.ಎನ್.ಜಗದೀಶ್, ಹೇಮ ಮಾಲಿನಿ, ನಟಿ ಅಮೃತ ತಾಯಿ ಜ್ಯೋತಿ, ಪಲ್ಲವಿ ಸಿ.ಟಿ.ರವಿ, ಮಹಿಳಾ ಉದ್ಯಮಿಗಳಾದ ಚೈತ್ರಾ ರಂಗಸ್ವಾಮಿ, ರಶ್ಮಿ ಕಶ್ಯಪ್, ಪ್ರಿಯಾಂಕಾ, ನಿಮಿತಾ ಸೇರಿದಂತೆ ಹಲವರು ಭಾಗವಹಿಸಿದ್ದರು.