ಬೆಂಗಳೂರಿನಲ್ಲಿ ಆ. 15ರಿಂದ ಮೂರು ದಿನಗಳ ‘ದ ಜ್ಯುವೆಲರಿ ಷೋ’

Jewellery show
Published on

ಬೆಂಗಳೂರು: ಮದುವೆ ಹಾಗೂ ಶುಭಕಾರ್ಯಗಳಿಗೆ ಮೆರುಗು ನೀಡುವ ‘ದ ಜ್ಯುವೆಲರಿ ಷೋ’ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಶುಕ್ರವಾರದಿಂದ ಭಾನುವಾರದವರೆಗೆ (ಆ. 15 ರಿಂದ 17) ನಗರದ ಶೆರಟನ್ ಗ್ರಾೃಂಡ್ ಹೋಟೆಲ್’ನಲ್ಲಿ ಆಯೋಜನೆಗೊಂಡಿದೆ.

ದೇಶದ 50 ಅಗ್ರಶ್ರೇಣಿಯ ಆಭರಣ ತಯಾರಕರು ಭಾಗವಹಿಸುತ್ತಿರುವ ಆಭರಣ ಮೇಳದಲ್ಲಿ ಸಾವಿರಾರು ವಿಭಿನ್ನ ವಿನ್ಯಾಸಗಳ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿವೆ. ಶುಕ್ರವಾರ ಮಧ್ಯಾಹ್ನ 12.30ಕ್ಕೆ ನಟಿ ಅಮೃತ ಪ್ರೇಮ್ ಮೇಳಕ್ಕೆ ಚಾಲನೆ ನೀಡಲಿದ್ದಾರೆ.

ಗ್ರಾಹಕರ ಅಭಿರುಚಿ ಹಾಗೂ ಬಜೆಟ್‌ಗೆ ಅನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ಸಿಗಲಿವೆ. ಕುಶಲಕರ್ಮಿಗಳು ತಯಾರಿಸಿದಂತಹ ವಿಭಿನ್ನ ಶೈಲಿಯ ಆಭರಣ ನೋಡುವ ಹಾಗೂ ಕೊಳ್ಳುವ ಅವಕಾಶ ನಗರದ ಜನರಿಗೆ ಒದಗಿ ಬಂದಿದೆ ಎಂದು ಆಯೋಜಕರಾದ ಗೋಲ್ಡನ್ ಕ್ರೀಪರ್ ಸಂಸ್ಥೆಯ ಬಿ.ಎನ್. ಜಗದೀಶ್ ಮತ್ತು ಹೇಮಲತಾ ಜಗದೀಶ್ ತಿಳಿಸಿದ್ದಾರೆ.

ಬಿಐಎಸ್ ಹಾಲ್ ಮಾರ್ಕ್

ಮೇಳದಲ್ಲಿ ಪ್ರದರ್ಶನಗೊಳ್ಳಲಿರುವ ಆಭರಣಗಳು ಬಿಐಎಸ್ ಹಾಲ್ ಮಾರ್ಕ್ ಹೊಂದಿರುತ್ತವೆ. ವಜ್ರಾಭರಣಗಳು, ಅಂತಾರಾಷ್ಟ್ರೀಯ ಗುಣಮಟ್ಟದ ಎಐಅ/ಐಎಐ ಪ್ರಮಾಣಿತ ಹೊಂದಿರುತ್ತವೆ. ಆಭರಣಗಳ ಕುರಿತು ಉಚಿತ ಮಾಹಿತಿ ದೊರೆಯಲಿದೆ. ಗ್ರಾಹಕರು ತಮ್ಮ ಹಳೇ ಚಿನ್ನ ಬದಲಾಯಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಮೇಳದ ನಂತರವೂ ಗ್ರಾಹಕರು ಆಭರಣಗಳಿಗೆ ಸಂಬಂಧಿಸಿದ ಸೇವೆ ಪಡೆಯಬಹುದಾಗಿದೆ. 50 ಹೆಸರಾಂತ ಆಭರಣ ಮಳಿಗೆಗಳು ಒಂದೇ ವೇದಿಕೆಯಲ್ಲಿ ಸೇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net